`ಕಾಂತಾರ’ ವರಾಹ ರೂಪಂ ಹಾಡಿನ ವಿವಾದಕ್ಕೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ

Public TV
1 Min Read
rishab Shetty

`ಕಾಂತಾರ’ (Kantara) ಯಶಸ್ಸಿನ ಅಲೆಯಲ್ಲಿ ರಿಷಬ್‌ (Rishab Shetty) ತೇಲುತ್ತಿದ್ದಾರೆ. ಇದೀಗ ಕಾರ್ಯಕ್ರಮದ ಅಂಗವಾಗಿ ಕಲಬುರಗಿಗೆ ಬಂದ ನಟನಿಗೆ ಫ್ಯಾನ್ಸ್ ಪ್ರೀತಿಯಿಂದ ಸ್ಟಾಗತಿಸಿದ್ದಾರೆ. ಈ ವೇಳೆ ʻವರಾಹ ರೂಪಂʼ ವಿವಾದದ ಬಗ್ಗೆ ರಿಷಬ್ ಪ್ರತಿಕ್ರಿಯಿಸಿದ್ದಾರೆ.

kantara 2 1

ರಿಷಬ್ ಶೆಟ್ಟಿ ನಟನೆ, ನಿರ್ದೇಶನಕ್ಕೆ ಇಡೀ ದೇಶವೇ ತಲೆಬಾಗಿದೆ. ರಿಷಬ್ ಪ್ರತಿಭೆಯನ್ನ ಗುರುತಿ ಇಂದು ಕಲಬುರಗಿಯಲ್ಲಿ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ನಟ ಮಾತನಾಡಿದ್ದಾರೆ. ಮಲಯಾಳಂನ ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್‌ನವರು ಕಾಂತಾರ ಸಿನಿಮಾದ `ವರಾಹ ರೂಪಂ’ ಹಾಡಿನ ಮೇಲೆ ಕೃತಿಚೌರ್ಯ ಆರೋಪ ಮಾಡಿದ್ದಾರೆ. ಕಲಬುರಗಿಗೆ ಬಂದ ವೇಳೆ ಹಾಡಿನ ವಿವಾದದ ಬಗ್ಗೆ ಮಾತನಾಡಲು ರಿಷಬ್ ಶೆಟ್ಟಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಮುಂದುವರಿದ ಸಂಘರ್ಷ -‘ಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

kantara 2

ಹಾಡಿನ ವಿಚಾರ ಕೋರ್ಟ್‌ನಲ್ಲಿ ಇದೆ. ಅಲ್ಲಿಂದ ಬಂದಾಗಲೇ ಮಾತನಾಡಬೇಕು. ಅದರ ಬಗ್ಗೆ ನಾವು ಇಲ್ಲಿ ಮಾತನಾಡಬಾರದು ಎಂದು ಕಾಂತಾರ ಹೀರೋ ರಿಷಬ್ ಮಾತನಾಡಿದ್ದಾರೆ. ಒಟಿಟಿಯಲ್ಲಿ ‘ಕಾಂತಾರ’ ಪ್ರಸಾರ ಆಗುತ್ತಿದ್ದು, ಅದರಲ್ಲಿ `ವರಾಹ ರೂಪಂ’ ಹಾಡು ಬದಲಾಗಿರುವುದಕ್ಕೆ ಅನೇಕ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

rishab

`ಕಾಂತಾರ 2′ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಟೈಮ್ ಬಂದಾಗ ಕಾಂತಾರ ಪಾರ್ಟ್ 2 ಚಿತ್ರ ಬರುತ್ತದೆ. ಅದರ ಬಗ್ಗೆ ಆಗಲೇ ಹೇಳುತ್ತೇವೆ. ಆ ಕುರಿತು ಈಗ ಯಾವುದೇ ಆಲೋಚನೆ ಇಲ್ಲ ಎಂದು ಅವರು ಹೇಳಿದ್ದಾರೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *