Bengaluru CityBollywoodCinemaKarnatakaLatestMain PostSandalwoodSouth cinema

ಮುಂದುವರಿದ ಸಂಘರ್ಷ -‘ಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

ನ್ನಡದ `ಕಾಂತಾರ’ಗೆ (Kantara) ಮತ್ತೊಂದು ಸಂಕಷ್ಟ ಎದುರಾಗಿದೆ. ಸಿನಿಮಾದ ‘ವರಾಹ ರೂಪಂ’ (Varaha Roopam) ಹಾಡಿನ ವಿರುದ್ಧ ಕೃತಿಚೌರ್ಯದ ಆರೋಪ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಅರ್ಜಿಯನ್ನು ವಜಾಗೊಳಿಸಿದ್ದ ಕೇರಳದ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.

ಮುಂದುವರಿದ ಸಂಘರ್ಷ -'ಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

ಹೊಂಬಾಳೆ ಬ್ಯಾನರ್, ರಿಷಬ್ ಶೆಟ್ಟಿ, ಪೃಥ್ವಿರಾಜ್ ಫಿಲ್ಮ್ಸ್, ಅಮೆಜಾನ್ ಸೆಲ್ಲರ್ ಸರ್ವೀಸ್ ಪ್ರೈವೇಟ್‌  ಲಿಮಿಟೆಡ್, ಗೂಗಲ್ ಇಂಡಿಯಾ ಹೆಡ್ ಆಫೀಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಮುಂದುವರಿದ ಸಂಘರ್ಷ -'ಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

ಸೆಪ್ಟೆಂಬರ್ 30,2022 ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ (Rishab Shetty) ಅವರ ಬ್ಲಾಕ್‌ಬಸ್ಟರ್ ಕನ್ನಡ ಚಲನಚಿತ್ರ ಕಾಂತಾರ ಸೂಪರ್ ಹಿಟ್ ಆಯಿತು. ಈ ನಡುವೆಯೇ ಸಿನಿಮಾದ ಸಂಗೀತ ಸಂಯೋಜಕ ಬಿ.ಅಜನೀಶ್ ಲೋಕನಾಥ್ ‘ವರಾಹ ರೂಪಂ’ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಗಳನ್ನು ಎದುರಿಸಿದರು. ಈ ಹಾಡು ಕೃತಿಚೌರ್ಯ. ಹೀಗಾಗಿ ಹಾಡಿನ ಪ್ರಸಾರಕ್ಕೆ ತಡೆ ನೀಡುವಂತೆ ಒತ್ತಾಯಿಸಿ ಥೈಕ್ಕುಡಂ ಬ್ರಿಡ್ಜ್ ಕೋರ್ಟ್ ಮೊರೆ ಹೋಗಿತ್ತು.

ಮುಂದುವರಿದ ಸಂಘರ್ಷ -'ಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

ವಿಚಾರಣೆಗೆ ನ್ಯಾಯವ್ಯಾಪ್ತಿ ಅಡ್ಡಿ ಎಂದು ಹೇಳಿ ಕೋರ್ಟ್ ಅರ್ಜಿಯನ್ನೇ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಥೈಕುಡಂ ಬ್ರಿಡ್ಜ್ ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಇದೀಗ ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ಆದೇಶಕ್ಕೆ ಕೇರಳ ಹೈಕೋರ್ಟ್(Kerala Court) ಗುರುವಾರ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ಕನ್ನಡದ `ಕಾಂತಾರ’ ತುಳು ಭಾಷೆಯಲ್ಲಿ ಇಂದು ರಿಲೀಸ್

ಮುಂದುವರಿದ ಸಂಘರ್ಷ -'ಕಾಂತಾರʼ ಪರ ತೀರ್ಪು ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿರುವ `ಕಾಂತಾರ’ ಚಿತ್ರದ `ವರಾಹ ರೂಪಂ’ ಹಾಡಿಗೆ ಕೃತಿಚೌರ್ಯದ ಆರೋಪ ಮಾಡಲಾಗಿತ್ತು. ಹೊಂಬಾಳೆ ಸಂಸ್ಥೆ ವಿರುದ್ಧ ವರಾಹ ರೂಪಂ ಹಾಡು ಬಳಸಿದಕ್ಕಾಗಿ ಥೈಕ್ಕುಡಂ ಬ್ರಿಡ್ಜ್ ಸಲ್ಲಿಸಿದ್ದ ಅರ್ಜಿಯನ್ನು ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯ ವಜಾ ಮಾಡಿ ಆದೇಶಿಸಿತ್ತು. ಈ ಆದೇಶಕ್ಕೆ ಕೇರಳ ಹೈಕೋರ್ಟ್ ಗುರುವಾರ (ಡಿ.2) ತಡೆಯಾಜ್ಞೆ ನೀಡಿದೆ.

ಈ ಎಲ್ಲಾ ವಿವಾದಗಳ ಮಧ್ಯೆ ಕನ್ನಡದ `ಕಾಂತಾರ’ ತುಳುವಿನಲ್ಲಿ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

Live Tv

Leave a Reply

Your email address will not be published. Required fields are marked *

Back to top button