ರಿಷಬ್ ಶೆಟ್ಟಿ (Rishab Shetty)ನಿರ್ದೇಶನದ ‘ಕಾಂತಾರ’ (Kantara) ಕನ್ನಡ ಚಿತ್ರ ದೇಶ, ವಿದೇಶಗಳಲ್ಲೂ ಭಾರಿ ಪ್ರಮಾಣದಲ್ಲಿ ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡಿ, ಮುಂದುವರಿಯುತ್ತಿದ್ದಂತೆ ಇತ್ತ ಕರಾವಳಿಯ ತುಳು ಭಾಷೆಗೂ ಡಬ್ಬಿಂಗ್ ಆಗಿ ‘ಕಾಂತಾರ’ ಹೆಸರಿನಲ್ಲೆ (ಡಿ.2) ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
Advertisement
ಈಗಾಗಲೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತಿತರ ಭಾಷೆಗಳಲ್ಲಿ ಡಬ್ ಆಗಿ ಕೋಟ್ಯಾಂತರ ಮೊತ್ತ ಬಾಚುತ್ತಿರುವ, ಹಿಂದಿನ ಎಲ್ಲ ಸಿನಿಮಾಗಳ ದಾಖಲೆ ಹಿಂದಿಕ್ಕುತ್ತಿರುವ `ಕಾಂತಾರ’ ಸಿನಿಮಾ ಕರಾವಳಿ ನೆಲದ ಭಾಷೆಯಲ್ಲಿ ಇದೇ ಮೊದಲ ಬಾರಿಗೆ ತೆರೆ ಕಾಣುತ್ತಿದೆ. ಅದು ಕೂಡ ಕರಾವಳಿ ಹಾಗೂ ಕರಾವಳಿಗರೇ ಹೆಚ್ಚಾಗಿ ಇರುವ ವಿದೇಶಿ ಟಾಕೀಸ್‌ಗಳಲ್ಲಿ ಎಂಬುದು ಗಮನಾರ್ಹ. ದುಬೈನಲ್ಲಿ ಈಗಾಗಲೇ ತುಳುವಿನಲ್ಲಿ ತೆರೆ ಕಂಡಿದೆ. ಇದನ್ನೂ ಓದಿ: `ಬಿಗ್ ಬಾಸ್’ ಜಯಶ್ರೀ ಆರಾಧ್ಯ ಮನೆ ಗೃಹಪ್ರವೇಶದ ಸಂಭ್ರಮ
Advertisement
View this post on Instagram
Advertisement
ಬುಕ್ ಮೈ ಶೋದಲ್ಲಿ `ಕಾಂತಾರ’ ತುಳು ಪೋಸ್ಟರ್ ಸದ್ದು ಮಾಡುತ್ತಿದೆ. ಟಿಕೆಟ್ ಸೋಲ್ಡ್ ಔಟ್ ಆಗಿದೆ. ದಕ್ಷಿಣ ಕನ್ನಡದಲ್ಲಿ ಮಂಗಳೂರು, ಉಡುಪಿ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಸಿನಿಮಾ ತೆರೆ ಕಂಡಿದ್ದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನ ಹಲವು ಮಾಲ್‌ಗಳಲ್ಲಿ `ಕಾಂತಾರ’ (Kanatara Tulu) ತುಳುವಿನಲ್ಲಿ ರಿಲೀಸ್ ಆಗಿದೆ.
Advertisement
View this post on Instagram
ದೈವದ ಕಥೆ ಹೊತ್ತ `ಕಾಂತಾರ’ ತುಳು ನಾಡಿನಲ್ಲಿಯೇ ತೆರೆ ಕಂಡಿದೆ. ರಿಷಬ್ ಶೆಟ್ಟಿ ನಟನೆಯ ಮೊದಲ ಸಿನಿಮಾ ಇದಾಗಿದ್ದು, ಅದೆಷ್ಟರ ಮಟ್ಟಿಗೆ ಸೌಂಡ್ ಮಾಡಲಿದೆ ಎಂಬುದನ್ನ ಕಾದುನೋಡಬೇಕಿದೆ.