ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ‘ಕಾಂತಾರ’ (Kantara) ಚಿತ್ರವು ಇದೀಗ 1 ವರ್ಷ ಪೂರೈಸಿದೆ. ಇದೇ ಖುಷಿಯಲ್ಲಿ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ, ಸಕ್ಸಸ್‌ಗೆ ಕಾರಣವಾದ ಎಲ್ಲರಿಗೂ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ
ರಿಷಬ್ ಶೆಟ್ಟಿ (Rishab Shetty) ನಟನೆ ಮತ್ತು ನಿರ್ದೇಶನದ ‘ಕಾಂತಾರ’ (Kantara) ಸಿನಿಮಾ ರಿಲೀಸ್ ಆಗಿ 1 ವರ್ಷ ಪೂರೈಸಿದೆ. ಕಳೆದ ವರ್ಷ 30ಕ್ಕೆ ಕಾಂತಾರ ಸಿನಿಮಾ ರಿಲೀಸ್ ಆಗಿತ್ತು. ದೈವದ ಪಂಜುರ್ಲಿ ಕಥೆಯನ್ನ ಅಭಿಮಾನಿಗಳು ಮೆಚ್ಚಿ ಗೆಲ್ಲಿಸಿದ್ದರು. ಈ ಅಭೂತಪೂರ್ವ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ನಾನು- ನನ್ನ ತಂಡ ಸದಾ ಚಿರಋಣಿ ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಕಾಂತಾರಕ್ಕೆ ಒಂದು ವರ್ಷದ ಸಂಭ್ರಮ. ಈ ಅಭೂತಪೂರ್ವ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ನಾನು ನನ್ನ ತಂಡ ಸದಾ ಚಿರಋಣಿ ????.
My deepest gratitude goes out to all the individuals who made this adventure possible, spreading its magic far and wide.#1yearofkantara #kantara #1yearofdivineblockbuster #kantara2 pic.twitter.com/LKXDYxNBUq
— Rishab Shetty (@shetty_rishab) September 30, 2023
‘ಕಾಂತಾರ’ ಚಿತ್ರ ರಿಲೀಸ್ ಬಳಿಕ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ರಿಷಬ್ ಸಿನಿಮಾ ಜನಪ್ರಿಯತೆ ಗಳಿಸಿತ್ತು. ಕರಾವಳಿ ಸೊಗಡಿನ ದೈವದ ಕಥೆಗೆ ಅಭಿಮಾನಿಗಳು ಫಿದಾ ಆಗಿದ್ದರು. ಬಹುಭಾಷೆಗಳಲ್ಲಿ ಚಿತ್ರ ಸಕ್ಸಸ್ ಕಂಡಿತ್ತು. ಕಾಂತಾರ ಸಿನಿಮಾವನ್ನ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿತ್ತು. ಕಾಂತಾರ ಸಕ್ಸಸ್ ಬಳಿಕ ಕಾಂತಾರ 2 ಮಾಡಲು ಸಿದ್ಧತೆ ನಡೆದಿದ್ದು, ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.
ರಿಷಬ್ ಶೆಟ್ಟಿ ಜೋಡಿಯಾಗಿ ಮೂಗುತಿ ಸುಂದರಿ ಸಪ್ತಮಿ ಗೌಡ (Saptami Gowda) ಸಾಥ್ ನೀಡಿದ್ದರು. ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕಿಶೋರ್ ಸೇರಿದಂತೆ ಹಲವರು ನಟಿಸಿದ್ದರು.