ಅಂಬರೀಶ್-ಸುಮಲತಾ ಅವರ ಪುತ್ರ ಅಭಿಷೇಕ್- ಅವಿವಾ (Aviva) ಆರತಕ್ಷತೆ ಅದ್ದೂರಿಯಾಗಿ ಪ್ಯಾಲೇಸ್ ಗ್ರ್ಯಾಂಡ್‌ನಲ್ಲಿ ನಡೆಯುತ್ತಿದೆ. ಸ್ಯಾಂಡಲ್‌ವುಡ್ ನಟ- ನಟಿಯರು ಬಾಲಿವುಡ್ ಸ್ಟಾರ್ಸ್ ಸಾಕ್ಷಿಯಾಗುವ ಮೂಲಕ ನವಜೋಡಿಗೆ ಶುಭಕೋರುತ್ತಿದ್ದಾರೆ. ಇದೀಗ ಅಭಿವಾ ಜೋಡಿಗೆ ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ (Rishab Shetty) ಜೋಡಿ ಸ್ವೀಟ್ ಆಗಿ ಮಾಡಿದ್ದಾರೆ.
ಐದಾರು ವರ್ಷಗಳ ಪ್ರೀತಿಗೆ ಅಭಿವಾ ಜೂನ್ 5ಕ್ಕೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮ ನಡೆಯುತ್ತಿದೆ. ಅಭಿವಾ ಜೋಡಿ ಗೋಲ್ಡನ್ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ. ಅಭಿವಾ ಆರತಕ್ಷತೆಗೆ ಚಿತ್ರರಂಗ- ರಾಜಕೀಯ ಸಾಕ್ಷಿಯಾಗಿದೆ.
ಅಭಿ ಮದುವೆ ಅಂದ್ರೆ ನಮಗೆಲ್ಲಾ ಸಂಭ್ರಮ. ಅವನನ್ನ ಇಷ್ಟೊಂದು ಡಿಸೆಂಟ್ ಆಗಿ, ತಾಳ್ಮೆಯಿಂದ ನಿಂತಿದ್ದಾನೆ. ಇದನ್ನ ನೋಡಿ ಖುಷಿಯಾಯ್ತು. ಅಭಿ ವೈವಾಹಿಕ ಜೀವನ ಚೆನ್ನಾಗಿರಲಿ ಅಂತಾ ಆಶಿಸುತ್ತೀನಿ ಎಂದು ರಿಷಬ್ ಶೆಟ್ಟಿ ದಂಪತಿ ಶುಭಹಾರೈಸಿದ್ದಾರೆ.
ಮಂಡ್ಯದಲ್ಲಿ ಅಭಿಷೇಕ್- ಅವಿವಾ ಜೂನ್ 16ರಂದು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಅಂದು ಮಂಡ್ಯದಲ್ಲಿ 1 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆಯಿದೆ.