ಕೊರೊನಾ ಏರಿಕೆ – ಕಾನ್ಪುರದಲ್ಲಿ 144 ಸೆಕ್ಷನ್‌ ಜಾರಿ

Public TV
0 Min Read
corona test 2

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ 144 ಸೆಕ್ಷನ್‌ ಜಾರಿ ಮಾಡಿದೆ.

ಒಂದು ತಿಂಗಳ ಕಾಲ 144 ಸೆಕ್ಷನ್‌ ಜಾರಿ ಮಾಡಿದ್ದು ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ಈ ಆದೇಶದ ಅನ್ವಯ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಪೊಲೀಸರ ಅನುಮತಿ ಇಲ್ಲದೇ ಯಾವುದೇ ಮೆರವಣಿಗೆ ಆಯೋಜಿಸುವಂತಿಲ್ಲ. ಮುಂದೆ ಪರೀಕ್ಷೆ ಮತ್ತು ಹಬ್ಬಗಳು ಬರಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶನಿವಾರ ದೇಶದಲ್ಲಿ 13,272 ಕೊರೊನಾ ಪ್ರಕರಣಗಳು ವರದಿಯಾಗಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *