ಲಕ್ನೋ: ಟೀಂ ಇಂಡಿಯಾ ಸ್ಟಾರ್ ರಿಂಕು ಸಿಂಗ್ (Rinku Singh) ಅವರ ತಂದೆ ಖಾನ್‌ಚಂದ್ರ ಸಿಂಗ್ (Khanchandra Singh) ನಿಧನರಾಗಿದ್ದಾರೆ. ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ರಿಂಕು ತಂದೆ ಕೊನೆಯುಸಿರೆಳೆದಿದ್ದು, ಕುಟುಂಬ ದುಃಖದಲ್ಲಿದೆ.
Pained to learn about the demise of Shri Khanchand Singh Ji, father of Rinku Singh. This must be an especially difficult time for Rinku and his family, even as he remains committed to his responsibilities during the T20 World Cup.
My heartfelt thoughts and prayers are with him…
— Harbhajan Turbanator (@harbhajan_singh) February 27, 2026
4ನೇ ಹಂತದ ಲಿವರ್ ಕ್ಯಾನ್ಸರ್‌ನಿಂದ (Liver Cancer) ಬಳಲುತ್ತಿದ್ದ ಖಾನ್‌ಚಂದ್ರ ಸಿಂಗ್ ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈ ವಾರ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದ್ದರಿಂದಲೇ ರಿಂಕು ಸಿಂಗ್ ಅವರು ಟಿ20 ವಿಶ್ವಕಪ್ ಟೂರ್ನಿಯಿಂದ ಜಿಂಬಾಬ್ವೆ ವಿರುದ್ಧದ ಸೂಪರ್ 8 ಪಂದ್ಯಕ್ಕೂ ಮುನ್ನ ಮನೆಗೆ ತೆರಳಿದ್ದರು.
ಅಪ್ಪನ ಸ್ಥಿತಿ ಗಂಭೀರಗೊಂಡಿದ್ದರೂ ಟಿ20 ವಿಶ್ವಕಪ್‌ನ ಕೆಲ ಪಂದ್ಯಗಳನ್ನ ಆಡುವ ಮೂಲಕ ರಿಂಕು ಸಿಂಗ್ ತಮ್ಮ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಹರ್ಭಜನ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸುವಂತೆ ಮನವಿ – ಪ್ರಧಾನಿ ಮೋದಿ, ರಾಜ್ಯಪಾಲರಿಗೆ ಪತ್ರ ಬರೆದ ಅರವಿಂದ ಬೆಲ್ಲದ

ಈ ಕುರಿತು ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಭಜ್ಜಿ, ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ ಜಿ ಅವರ ನಿಧನದ ಬಗ್ಗೆ ತಿಳಿದು ನೋವಾಯಿತು. ಟಿ20 ವಿಶ್ವಕಪ್ ಸಮಯದಲ್ಲಿ ತಮ್ಮ ಜವಾಬ್ದಾರಿಗಳಿಗೆ ಬದ್ಧರಾಗಿದ್ದ ರಿಂಕು ಮತ್ತು ಅವರ ಕುಟುಂಬಕ್ಕೆ ಇದು ಕಷ್ಟಕರ ಸಮಯವಾಗಿದೆ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Afghanistan-Pakistan conflict | ಪಾಕ್‌ನ F-16 ಜೆಟ್ ಉಡೀಸ್ – ಬಹಿರಂಗ ಯುದ್ಧ ಘೋಷಿಸಿದ ಶೆಹಬಾಜ್ ಷರೀಫ್

