ಬೆಂಗಳೂರು: ರಾಜ್ಯದಲ್ಲಿ ಒಂದು ಕಾಲದಲ್ಲಿ ಭಾರೀ ಸಂಚಲನ ಮೂಡಿಸಿದ್ದ ರಿಂಗ್ ರೋಡ್ ಶುಭಾ ಪ್ರಕರಣ (Ring Road Shubha Case) ಮತ್ತೆ ಮುನ್ನೆಲೆಗೆ ಬಂದಿದೆ. 2003ರಲ್ಲಿ ಸುದ್ದಿಯಾಗಿದ್ದ ಈ ಪ್ರಕರಣದ ಅಪರಾಧಿಗಳಾದ ಶುಭಾ ಶಂಕರನಾರಾಯಣ ಮತ್ತು ಡಿ. ಅರುಣ್ ವರ್ಮಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಗಳ ಕುರಿತು ಇಂದು ನಡೆಯಲಿರುವ ಸಚಿವ ಸಂಪುಟ (Cabinet Meeting) ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.
ಭಾವಿ ಪತಿ ಗಿರೀಶ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶುಭಾ ಶಂಕರನಾರಾಯಣ ಹಾಗೂ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಡಿ. ಅರುಣ್ ವರ್ಮಾ ಕ್ಷಮಾದಾನ ಕೋರಿ ರಾಜ್ಯಪಾಲರ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕ ನೀರುಪಾಲು
ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಈ ತೀರ್ಪಿನ ಬಳಿಕ ಶುಭಾ ಮತ್ತು ಅರುಣ್ ವರ್ಮಾ ರಾಜ್ಯಪಾಲರ ಮುಂದೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಈ ಅರ್ಜಿಗಳು ರಾಜ್ಯ ಸರ್ಕಾರದ ಪರಿಶೀಲನೆಯ ಹಂತಕ್ಕೆ ಬಂದಿವೆ. ಇದನ್ನೂ ಓದಿ: ಚಿತ್ರದುರ್ಗ | ಒತ್ತಾಯಪೂರ್ವಕವಾಗಿ ಯುವಕನ ಗುಪ್ತಾಂಗದ ಶಸ್ತ್ರಚಿಕಿತ್ಸೆ – ಇಬ್ಬರು ಮಂಗಳಮುಖಿಯರ ಬಂಧನ
ರಿಂಗ್ ರೋಡ್ ಶುಭಾ ನೇರವಾಗಿ ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರ ಕಾರ್ಯಾಲಯವು ಅರ್ಜಿಯನ್ನು ಪರಿಶೀಲನೆ ಹಾಗೂ ವರದಿ ಪಡೆಯುವ ಉದ್ದೇಶದಿಂದ ರಾಜ್ಯದ ಗೃಹ ಇಲಾಖೆಗೆ ರವಾನಿಸಿದೆ. ಗೃಹ ಇಲಾಖೆಯು ಜೈಲು ಅಧಿಕಾರಿಗಳು ಮತ್ತು ಪೊಲೀಸರಿಂದ ಅಗತ್ಯ ವರದಿಗಳನ್ನು ಪಡೆದು, ಸಂಬಂಧಿತ ಕಡತವನ್ನು ಸಚಿವ ಸಂಪುಟದ ಮುಂದೆ ಮಂಡಿಸುವ ಪ್ರಕ್ರಿಯೆ ಅನುಸರಿಸುತ್ತದೆ. ಈ ಹಿನ್ನೆಲೆಯಲ್ಲಿ ಶುಭಾ ಮತ್ತು ಅರುಣ್ ವರ್ಮಾ ಅವರ ಕ್ಷಮಾದಾನ ಅರ್ಜಿಗಳು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಲಂಚಕ್ಕಾಗಿ 500 ಕೋಟಿ ರಕ್ಷಣಾ ಒಪ್ಪಂದದ ಮಾಹಿತಿ ಸೋರಿಕೆ ಆರೋಪ – ಮ್ಯೂನಿಷನ್ಸ್ ಇಂಡಿಯಾ CEO ಸೇರಿ ಮೂವರು ಅರೆಸ್ಟ್
ಕ್ಷಮಾದಾನ ಅರ್ಜಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಕ್ಷಮಾದಾನ ಅರ್ಜಿಯ ಪರಿಶೀಲನೆಯಲ್ಲಿ ಸರ್ಕಾರದ ಶಿಫಾರಸು ಪ್ರಮುಖ ಪಾತ್ರ ವಹಿಸುತ್ತದೆ. ಅರ್ಜಿಯ ಕುರಿತು ಸಂಬAಧಿತ ವರದಿಗಳನ್ನು ಪರಿಶೀಲಿಸಿದ ಬಳಿಕ ಸಚಿವ ಸಂಪುಟವು ತನ್ನ ನಿರ್ಧಾರ ಅಥವಾ ಶಿಫಾರಸನ್ನು ರಾಜ್ಯಪಾಲರಿಗೆ ಕಳುಹಿಸಬಹುದು. ಸಂಪುಟದ ಆ ನಿರ್ಧಾರಕ್ಕೆ ರಾಜ್ಯಪಾಲರು ಅಧಿಕೃತವಾಗಿ ಅಂಕಿತ ಹಾಕಬೇಕಾಗುತ್ತದೆ. ಹೀಗಾಗಿ ರಿಂಗ್ ರೋಡ್ ಶುಭಾ ಕ್ಷಮಾದಾನ ಅರ್ಜಿ ಭವಿಷ್ಯ ಇಂದು ನಿರ್ಧಾರವಾಗಲಿದೆ. ಇದನ್ನೂ ಓದಿ: ಲಡಾಖ್ಗೆ 3,350 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಕೊಡುಗೆ – ಇಂದು ಮೋದಿಯಿಂದ 5 ಯೋಜನೆಗಳ ಉದ್ಘಾಟನೆ

