ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ ವೈದ್ಯಕೀಯ ಬೋಧಕ ಆಸ್ಪತ್ರೆ ಮುಂದೆ ಅಂಬ್ಯುಲೆನ್ಸ್ ಇಲ್ಲದೆ ರೋಗಿಯೊಬ್ಬ ಸುಮಾರು ಅರ್ಧಗಂಟೆ ಕಾಲ ಫುಟ್‍ಪಾತ್ ಮೇಲೆ ನರಳಾಡಿದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯಿಂದ ರಿಮ್ಸ್‌ಗೆ ಬಂದಿದ್ದ ಸುಮಾರು 38 ವರ್ಷ ಪ್ರಾಯದ ನಾಗರಾಜ್ ವೈದ್ಯರ ಸಲಹೆ ಮೇರೆಗೆ ಬೇರೆ ಆಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ಇಲ್ಲದೆ ಆಸ್ಪತ್ರೆ ಹೊರಗಡೆಯೇ ಸುಮಾರು ಹೊತ್ತು ನರಳಾಡಬೇಕಾಯಿತು. ಇದನ್ನೂ ಓದಿ: ನಾನು 35 ಅಂಕ ಕೆಟಗೆರಿಯವರು ಅದಕ್ಕೆ ಕೈಗಾರಿಕಾ ಸಚಿವನಾದೆ: ಮುರುಗೇಶ್ ನಿರಾಣಿ
ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದ ರೋಗಿ ರಿಮ್ಸ್ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದ, ಓಪೆಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು. ಆದರೆ ರೋಗಿಗೆ ಹೋಗಲು ಸಾಧ್ಯವಾಗಿಲ್ಲ, ಆಸ್ಪತ್ರೆ ಹೊರಗೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾದರೂ ಕೂಡ ಅಂಬ್ಯುಲೆನ್ಸ್ ಬಾರದ ಹಿನ್ನೆಲೆ ರೋಗಿ ಫುಟ್‍ಪಾತ್ ಮೇಲೆ ಮಲಗಿದ್ದ. ಇದನ್ನು ಗಮನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಬಳಿಕ ಎಚ್ಚೆತ್ತ ವೈದ್ಯಾಧಿಕಾರಿಗಳು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ರೋಗಿಯನ್ನು ಓಪೆಕ್ ಆಸ್ಪತ್ರೆಗೆ ರವಾನಿಸಿದರು. ಇದನ್ನೂ ಓದಿ: ನಮ್ಮ ಹಾಜರಿ ಕ್ಯಾಂಟೀನ್‍ನಲ್ಲೇ ಹೆಚ್ಚಾಗಿರುತ್ತಿತ್ತು ಕಾಲೇಜು ದಿನಗಳನ್ನು ನೆನಪಿಸಿಕೊಂಡ ಸಿಎಂ ಬೊಮ್ಮಾಯಿ