ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) 75 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ಘೋಷಿಸಿದ್ದಾರೆ.
ದೂರಸಂಪರ್ಕ ಕ್ಷೇತ್ರದಲ್ಲಿ 5ಜಿ ಸೇವೆಯನ್ನು ಉನ್ನತೀಕರಿಸುವ ವಿಷಯವೂ ಸೇರಿದಂತೆ, ಚಿಲ್ಲರೆ ವಹಿವಾಟು ಹಾಗೂ ಇಂಧನದ ಉತ್ಪಾದನ ಕ್ಷೇತ್ರದ ಮೇಲೆ ಮುಂದಿನ ನಾಲ್ಕು ವರ್ಷಗಳಲ್ಲಿ 75000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.
Advertisement
Mukesh Ambani at Uttar Pradesh Global Investors Summit #UPInvestorsSummit #UPGIS23 #MukeshAmbani #RelianceIndustries pic.twitter.com/iU0uAiZL4U
— Pankaj Upadhyay (@pankaju17) February 10, 2023
Advertisement
ಉತ್ತರ ಪ್ರದೇಶ ಆಯೋಜಿಸಿದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ (Global Investors Summit) ಮಾತನಾಡಿದ ಅವರು ಈ ವರ್ಷದ ಕೊನೆಯೊಳಗೆ 5ಜಿ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
Advertisement
ಜಿಯೋ (Jio) ಸೇವೆಯ ಉನ್ನತೀಕರಣದಿಂದ ವ್ಯವಹಾರ ಹಾಗೂ ಕೈಗಾರಿಕೆ, ಕೃಷಿ, ಸಾಮಾಜಿಕ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ. 5ಜಿ ಸೇವೆಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಕುರಿತು ಸರ್ಕಾರದೊಂದಿಗೆ ಚರ್ಚಿಸಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ
Advertisement
ರಿಲಯನ್ಸ್ ಹೂಡಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು ಸಾವಿರಾರು ಕಿರಾಣಿ ಅಂಗಡಿಗಳು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚು ಲಾಭಗಳಿಸಲು ಸಾಧ್ಯವಾಗಲಿದೆ. ಕೃಷಿ ಹಾಗೂ ಕೃಷಿಯೇತರ ತ್ಯಾಜ್ಯಗಳನ್ನು ಬಳಸಿ ಜೈವಿಕ ಇಂಧನ ಘಟಕ ಹಾಗೂ ಹತ್ತು ಸಾವಿರ ಮೆಗಾವ್ಯಾಟ್‍ನಷ್ಟು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k