ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ನಡುವಿನ ಭಿನ್ನಮತದಲ್ಲಿ ನಾನು ಯಾರ ಬಣದಲ್ಲಿ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಯಾವುದೇ ಬಣಕ್ಕೆ ಸೇರಿಲ್ಲ. ಅಷ್ಟಕ್ಕೂ ಬಣವೆಂಬುದೇ ಬಿಜೆಪಿಯಲ್ಲಿಲ್ಲ. ನಾಯಕರ ನಡುವಿನ ವೈಯಕ್ತಿಕ ಪ್ರತಿಷ್ಠೆ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿಯಿದ್ದು, ಹಾಗಾಗಿ ಯಾವುದೇ ರೀತಿ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದು ವರಿಷ್ಠರು ಹೇಳಿದ್ದಾರೆ. ಅದರಂತೆ ಪಕ್ಷದಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ತಿಳಿಸಿದರು.
Advertisement
ಶಿವಮೊಗ್ಗ ರಾಜಕಾರಣ ಕಾರಣ: ಬಿಜೆಪಿಯಲ್ಲಿನ ಗೊಂದಲಕ್ಕೆ ಶಿವಮೊಗ್ಗ ರಾಜಕಾರಣ ಕಾರಣ. ಶಿವಮೊಗ್ಗದಲ್ಲಿನ ವೈಯಕ್ತಿಕ ರಾಜಕಾರಣಕ್ಕೆ ಈ ಗೊಂದಲ ಸೃಷ್ಟಿಯಾಗಿದೆ. ಅತೃಪ್ತರ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಶಿವಮೊಗ್ಗದವರು ಎಂದು ತಿಳಿಸಿದರು.
Advertisement
ಶಾಸಕರಾದ ಗೋವಿಂದ ಕಾರಜೋಳ, ಸುರೇಶ್ ಗೌಡ ಅವರೊಂದಿಗೆ ಅಶೋಕ್ ಅವರು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Advertisement
ಇದನ್ನೂ ಓದಿ: ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ: ಬಿಎಸ್‍ವೈ ವಿರುದ್ಧ ಈಶ್ವರಪ್ಪ ಗುಡುಗು
Advertisement
ಇದನ್ನೂ ಓದಿ: ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಬಿಎಸ್‍ವೈ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ: ವಿಡಿಯೋ ನೋಡಿ
ಇದನ್ನೂ ಓದಿ: ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ