ರಾಮನಗರ: ಮುತ್ತಪ್ಪ ರೈ (Muthappa Rai) ಪುತ್ರ ರಿಕ್ಕಿ ರೈ (Ricky Rai) ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೊಂದು ಫೇಕ್ ಅಟ್ಯಾಕ್ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ರಿಕ್ಕಿ ರೈ ಮನೆಯ ಭದ್ರತೆ ನೋಡಿಕೊಳ್ಳುತ್ತಿದ್ದ ವಿಠ್ಠಲ್‌ನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಕಳೆದ ಏ.18ರ ಮಧ್ಯರಾತ್ರಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಫೈರಿಂಗ್ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಇದು ಸುಪಾರಿ ಕಿಲ್ಲರ್‌ನಿಂದ ನಡೆದ ಅಟ್ಯಾಕಾ ಅಥವಾ ಜೊತೆಯಲ್ಲಿದ್ದವರಿಂದಲೇ ನಡೆದ ಕೊಲೆ ಯತ್ನವಾ ಎಂಬ ಅನುಮಾನದ ಮೇಲೆ ತನಿಖೆ ನಡೆಸಿದ ಪೊಲೀಸರಿಗೆ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳು ಮಹತ್ವದ ಸುಳಿವು ನೀಡಿವೆ. ಇದನ್ನೂ ಓದಿ: Exclusive | ರಿಕ್ಕಿ ರೈಗಿದ್ದ ಭದ್ರತೆ ನೋಡಿದ್ರೆ ಎದುರಾಳಿಗಳು ಹತ್ತಿರ ಸುಳಿಯೋಕು ನಡುಗುತ್ತಾರೆ!
ಮನೆಗೆಲಸದವರು, ಗನ್ ಮ್ಯಾನ್‌ಗಳು, ಸೆಕ್ಯುರಿಟಿ, ಮ್ಯಾನೇಜರ್ ಹಾಗೂ ಆಡಿಟರ್‌ಗಳನ್ನ ವಿಚಾರಣೆ ಮಾಡಿದ್ದ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು. ಆದರೆ ವಿಚಾರಣಾಧೀನರ ಹೇಳಿಕೆಗೂ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳಿಗೂ ತಾಳೆ ಆಗದಿರುವುದು ಇದೊಂದು ಫೇಕ್ ಅಟ್ಯಾಕ್ ಎಂಬ ಅನುಮಾನ ಬಂದಿದೆ. ಇದನ್ನೂ ಓದಿ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಹತ್ಯೆಗೆ ಯತ್ನ – ಶೂಟೌಟ್ ಹಿಂದೆ ಭೂಗತ ಲೋಕದ ಕೈವಾಡ..?
ಸೋಮವಾರ ಇಡೀ ದಿನ ರಿಕ್ಕಿ ರೈ ಗನ್ ಮ್ಯಾನ್‌ಗಳನ್ನ ವಿಚಾರಣೆ ಮಾಡಿದ್ದ ಪೊಲೀಸರು, ಬಿಡದಿ ಫಾರ್ಮ್ಹೌಸ್‌ನಲ್ಲೂ ಸಂಪೂರ್ಣ ತಲಾಶ್ ಮಾಡಿದ್ದರು. ರಿಕ್ಕಿ ಭದ್ರತೆಗಾಗಿ ಇಟ್ಟುಕೊಂಡಿದ್ದ ಗನ್‌ಗಳೆಷ್ಟು, ಎಷ್ಟು ಬುಲೆಟ್ ಇವೆ. ಎಲ್ಲಾ ಗನ್‌ಗಳಿಗೂ ಲೈಸೆನ್ಸ್ ಇದ್ಯಾ ಎಂಬ ಪರಿಶೀಲನೆ ವೇಳೆ ಫೈರಿಂಗ್ ಸ್ಥಳದಲ್ಲಿ ಸಿಕ್ಕ ಗುಂಡಿಗೂ ರಿಕ್ಕಿ ರೈ ಮನೆಯ ಭದ್ರತೆ ನೋಡಿಕೊಳ್ಳುತ್ತಿದ್ದ ವಿಠ್ಠಲ್ ಎಂಬಾತನಿಗೂ ಗನ್‌ಗೂ ಸಾಮ್ಯತೆ ಇದೆ. ಹಾಗಾಗಿ ಗನ್ ಮ್ಯಾನ್ ವಿಠ್ಠಲ್‌ನನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಅಲ್ಲದೇ ತನಿಖೆಯ ದಿಕ್ಕು ತಪ್ಪಿಸಲು ಸಿಮ್ ಇಲ್ಲದ ಮೊಬೈಲ್ ಬಿಸಾಕಿ, ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಂಗ್ ಕಮಾಂಡರ್ ತಪ್ಪು ಮಾಡಿದ್ರೂ ತಪ್ಪೇ: ಸಿಎಂ
ಮುತ್ತಪ್ಪ ರೈ ಗನ್ ಮ್ಯಾನ್ ಆಗಿದ್ದ ಮಡಿಕೇರಿ (Madikeri) ಮೂಲದ ವಿಠ್ಠಲ್, ಮುತ್ತಪ್ಪ ರೈ ನಿಧನದ ಬಳಿ ಅವರ ಕುಟುಂಬದ ಭದ್ರತೆ ನೋಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಹೆಚ್ಚಾಗಿದ್ದ ಕಾರಣ ಅವರಿಗೆ ಬಿಡದಿ ಮನೆಯ ಭದ್ರತೆ ಜವಾಬ್ದಾರಿ ನೀಡಲಾಗಿತ್ತು. ಘಟನೆ ನಡೆಯುವ ಮುನ್ನ ರಿಕ್ಕಿ ರೈ ಹಾಗೂ ವಿಠ್ಠಲ್ ಪ್ರತ್ಯೇಕ ಮಾತುಕತೆ ನಡೆಸಿದ್ದು, ಮನೆಯಿಂದ ಹೊರ ಹೋಗಿದ್ದರು.
ಘಟನೆ ನಡೆದು ರಿಕ್ಕಿ ರೈ ಆಸ್ಪತ್ರೆಗೆ ಸೇರಿದ ಬಳಿಕ ಮತ್ತೆ ವಿಠ್ಠಲ್ ಮನೆಗೆ ವಾಪಸ್ ಬಂದಿದ್ದ ಎಂಬುದು ಮನೆಯ ಸಿಸಿಟಿವಿ ಕ್ಯಾಮರಾದಿಂದ ಪೊಲೀಸರಿಗೆ ತಿಳಿದುಬಂದಿದೆ. ಹಾಗಾಗಿ ವಿಠ್ಠಲ್‌ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ವಿಠ್ಠಲ್‌ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ಮತ್ತಷ್ಟು ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ಸಂಸತ್ತೇ ಸರ್ವೋಚ್ಚ, ಚುನಾಯಿತ ಪ್ರತಿನಿಧಿಗಳು ಸಾಂವಿಧಾನಿಕ ವಿಷಯದ ಅಲ್ಟಿಮೇಟ್ ಮಾಸ್ಟರ್ಸ್: ಧನಕರ್
ಒಟ್ಟಾರೆ ರಿಕ್ಕಿ ರೈ ಮೇಲೆ ಅಟ್ಯಾಕ್ ಆದಾಗ ಗನ್ ಮ್ಯಾನ್ ಇದ್ರೂ ಕೌಂಟರ್ ಅಟ್ಯಾಕ್ ಆಗಿರಲಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇದೊಂದು ಫೇಕ್ ಅಟ್ಯಾಕ್ ಎನ್ನಲಾಗಿದೆ. ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಬೇಕಿದೆ.