ನಿನ್ನೆಯಷ್ಟೇ ತಮ್ಮ ಗ್ರ್ಯಾಮಿ ಪ್ರಶಸ್ತಿ ಪದಕವು ಎರಡು ತಿಂಗಳಿಂದ ಕಸ್ಟಮ್‌ನಲ್ಲಿದೆ. ಕೊರಿಯರ್ ಮತ್ತು ಕಸ್ಟಮ್ ಅಧಿಕಾರಿಗಳ ಅಸಹಕಾರದಿಂದಾಗಿ ಇನ್ನೂ ನನ್ನ ಕೈಗೆ ಪದಕ ಸಿಕ್ಕಿಲ್ಲವೆಂದು ರಿಕಿ ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡುತ್ತಿದ್ದಂತೆಯೇ ರಿಕಿ ಅಭಿಮಾನಿಗಳು ಕಸ್ಟಮ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದರು. ರಿಕಿ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಕಸ್ಟಮ್ ಅಧಿಕಾರಿಗಳು, ಆಗಿರುವ ಸಮಸ್ಯೆಯನ್ನು ಬೇಗ ಸರಿಪಡಿಸಿ ಪದಕ ತಲುಪಿಸಲಾಗುವುದು ಎಂದಿದ್ದರು.
ಕಸ್ಟಮ್ಸ್ ಅಧಿಕಾರಿಗಳಿಗೆ ಅದರಲ್ಲಿ ಗ್ರ್ಯಾಮಿ ಅವಾರ್ಡ್ ಇರುವುದು ಗೊತ್ತಿರದೇ ಇರುವ ಕಾರಣಕ್ಕಾಗಿ ತಮ್ಮ ನಿಯಮಗಳನ್ನು ಅನುಸರಿಸಿದ್ದಾರೆ. ಈಗ ಪ್ರಕ್ರಿಯೆ ಎಲ್ಲ ಮುಗಿದಿದೆ. ಹಾಗಾಗಿ ಶೀಘ್ರದಲ್ಲೇ ಪದಕಗಳು ಕೈ ಸೇರಲಿವೆ ಎಂದು ಸಂಜೆ ಮತ್ತೆ ರಿಕಿ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದರು. ಕಸ್ಟಮ್ ಅಧಿಕಾರಿಗಳು ಅಂದುಕೊಂಡಂತೆ ನಡೆದುಕೊಂಡಿದ್ದಾರೆ. ಆಗಿದ್ದ ಸಮಸ್ಯೆಯನ್ನು ಸರಿಪಡಿಸಿ ಇಂದು ಗ್ರ್ಯಾಮಿ ಪದಕವನ್ನು ರಿಕಿ ಕೇಜ್ ಅವರಿಗೆ ಮುಟ್ಟಿಸಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿ, ಧನ್ಯವಾದಗಳನ್ನು ಕೂಡ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್
ರಿಕಿ ಕೇಜ್ ಅವರಿಗೆ ಎರಡನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ನಾಡಿನ ಸಾಕಷ್ಟು ದಿಗ್ಗಜರು ರಿಕಿ ಕೇಜ್‌ಗೆ ಅಭಿನಂದಿಸಿದ್ದಾರೆ. ಅದರಲ್ಲೂ ಕನ್ನಡದ ನೆಲೆ ರಿಕಿ ಕೇಜ್ ಬಗ್ಗೆ ಗುಣಗಾನ ಕೂಡ ಮಾಡಿದೆ. ಗ್ರ್ಯಾಮಿ ಪ್ರಶಸ್ತಿ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕರ್ನಾಟಕದ ಸಾಕಷ್ಟು ಗಣ್ಯರು ರಿಕಿಯನ್ನು ಅಭಿನಂದಿಸಿದ್ದಾರೆ.