ಲಂಡನ್: ಪ್ಯಾರಿಸ್‍ನ ಪಾಂಪಿಡೌ ಸೆಂಟರ್ ಸೇರಿದಂತೆ ವಿಶ್ವದ ಹಲವು ಪ್ರಸಿದ್ಧ ಕಟ್ಟಡಗಳನ್ನು ವಿನ್ಯಾಸಗೊಳಿಸಿದ್ದ ಬ್ರಿಟಿಷ್ ವಾಸ್ತುಶಿಲ್ಪಿ ರಿಚರ್ಡ್ ರೋಜರ್ಸ್ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
Advertisement
‘ಮಿಲೇನಿಯಮ್ ಡೋಮ್’ ಮತ್ತು ‘ಚೀಸ್‍ಗ್ರೇಟರ್’ ನಂತಹ ವಿಶಿಷ್ಟ ರಚನೆಗಳೊಂದಿಗೆ ಲಂಡನ್ ಸ್ಕೈಲೈನ್ ಅನ್ನು ಬದಲಾಯಿಸಿದ ರೋಜರ್ಸ್ ಶನಿವಾರ ರಾತ್ರಿ ನಿಧನರಾಗಿದ್ದು, ಅವರ ಮಗ ರೂ ರೋಜರ್ಸ್ ತಂದೆ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಇದನ್ನೂ ಓದಿ: ಚೀನಾದ 135 ವರ್ಷದ ವೃದ್ಧೆ ಸಾವು
Advertisement
ಇಟಾಲಿಯನ್ ಮೂಲದ ವಾಸ್ತುಶಿಲ್ಪಿ 2007 ರ ‘ಪ್ರಿಟ್ಜಕರ್ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಅವರು ಗೆದ್ದಿದ್ದಾರೆ. ಗಾಜು ಮತ್ತು ಉಕ್ಕಿನಂತಹ ಕೈಗಾರಿಕಾ ವಸ್ತುಗಳನ್ನು ಒಳಗೊಂಡಿರುವ ರಚನೆಗಳಿಂದ ಗುರುತಿಸಲ್ಪಟ್ಟ ‘ಹೈ-ಟೆಕ್’ ಆರ್ಕಿಟೆಕ್ಚರ್ ಚಳುವಳಿಯ ಪ್ರವರ್ತಕರಲ್ಲಿ ಇವರು ಸಹ ಒಬ್ಬರಾಗಿದ್ದರು. ರಿಚರ್ಡ್ ಅವರು ಫ್ರಾನ್ಸ್‍ನ ಪಾಂಪಿಡೌ ಸೆಂಟರ್‍ನ ಸಹ-ಸೃಷ್ಟಿಕರ್ತರಾಗಿದ್ದಾರೆ.
Advertisement
Advertisement
ಸ್ಟ್ರಾಸ್‍ಬರ್ಗ್‍ನ ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ ಮತ್ತು ನ್ಯೂಯಾರ್ಕ್‍ನಲ್ಲಿರುವ ಮೂರು ವಿಶ್ವ ವ್ಯಾಪಾರ ಕೇಂದ್ರ, ಹಾಗೆಯೇ ಮ್ಯಾಡ್ರಿಡ್ ಮತ್ತು ಲಂಡನ್‍ನ ಹೀಥ್ರೂದಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ರಿಚರ್ಡ್ ಅವರೇ ವಿನ್ಯಾಸಗೊಳಿಸಿದ್ದರು.
ಫ್ಲಾರೆನ್ಸ್‌ನಲ್ಲಿ ರಿಚರ್ಡ್ ಅವರು 1933ರಲ್ಲಿ ಜನಿಸಿದ್ದು, ಅವರ ತಂದೆ ವೈದ್ಯರಾಗಿದ್ದು, ತಾಯಿ ಪ್ರಸಿದ್ಧ ಐರಿಶ್ ಬರಹಗಾರ ಜೇಮ್ಸ್ ಜಾಯ್ಸ್ ಅವರ ಮಾಜಿ ಶಿಷ್ಯರಾಗಿದ್ದರು. ಈ ಕುಟುಂಬವು ಮುಸೊಲಿನಿಯ ಸರ್ವಾಧಿಕಾರದಿಂದ ಪಲಾಯನ ಮಾಡಿ, 1938 ರಲ್ಲಿ ಇಂಗ್ಲೆಂಡ್ ಗೆ ಬಂದು ನೆಲೆಸಿತು. ಇದನ್ನೂ ಓದಿ: ಮಹಾತ್ಮರ ಪುತ್ಥಳಿ ಹಾಳು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ: ಬಿಎಸ್‍ವೈ
ರಿಚರ್ಡ್ ಅವರು 1951 ರಲ್ಲಿ ಶಾಲೆಯನ್ನು ತೊರೆದಿದ್ದು, ಲಂಡನ್‍ನ ಆರ್ಕಿಟೆಕ್ಚರಲ್ ಅಸೋಸಿಯೇಷನ್ ಸ್ಕೂಲ್‍ಗೆ ಪ್ರವೇಶ ಪಡೆದರು. ಅವರು 1962 ರಲ್ಲಿ ತಮ್ಮ ವಾಸ್ತುಶಿಲ್ಪದ ಅಧ್ಯಯನವನ್ನು ಪೂರ್ಣಗೊಳಿಸಿ ವೃತ್ತಿಜೀವನವನ್ನು ಆರಂಭಿಸಿದರು.