InternationalLatestMain Post

ಚೀನಾದ 135 ವರ್ಷದ ವೃದ್ಧೆ ಸಾವು

ಬೀಜಿಂಗ್: ಅತ್ಯಂತ ಹಿರಿಯ ವಯೋವೃದ್ಧೆಯಾಗಿರುವ 135 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ.

ಚೈನಾದ ಅತ್ಯಂತ ವಯೋವೃದ್ಧೆ ಎನ್ನುವ ಹಿರಿಮೆ ಹೊಂದಿದ್ದ ಅಲಿಮಿಹಾನ್ ಸೆಯಿತಿ ತಮ್ಮ 135ನೇ ವಯಸ್ಸಿನಲ್ಲಿ ಕ್ಸಿನ್‍ಜಿಯಾಂಗ್ ಉಯಿಗುರ್ ಪ್ರದೇಶದಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

2013 ರಲ್ಲಿ, ಚೀನಾ ಅಸೋಸಿಯೇಶನ್ ಆಫ್ ಜೆರೊಂಟಾಲಜಿ ಮತ್ತು ಜೆರಿಯಾಟ್ರಿಕ್ಸ್ ಬಿಡುಗಡೆ ಮಾಡಿದ ಚೀನಾದ ಅತ್ಯಂತ ಹಳೆಯ ವ್ಯಕ್ತಿಗಳ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದರು. ತುಂಬಾ ಸರಳ ಜೀವನವನ್ನು ನಡೆಸುತ್ತಿದ್ದರು. ಯಾವಾಗಲೂ ಸಮಯಕ್ಕೆ ಸರಿಯಾಗಿ ತಿನ್ನುತ್ತಿದ್ದರು, ತನ್ನ ಮೊಮ್ಮಕ್ಕಳ ಜೊತೆಗೆ ಕುಳಿತು ಕಾಲ ಕಳೆಯುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಇದನ್ನೂ ಓದಿ:  ಮಂಗ, ಶ್ವಾನಗಳ ವಾರ್‌ನಲ್ಲಿ ಪ್ರಾಣ ಕಳೆದುಕೊಂಡ 80 ನಾಯಿಮರಿಗಳು

ಚೀನಾದ ದಾಖಲೆಯ ಪ್ರಕಾರ 1886 ಜೂನ್ 25ರಂದು ಜನಿಸಿದ ಸೆಯಿತಿ ಅವರು ದೀರ್ಘಾಯುಷಿಗಳ ಪಟ್ಟಣವೆಂದೇ ಪ್ರಸಿದ್ಧಿ ಪಡೆದ ಕೊಮುಕ್ಸೆರಿಕ್ ಟೌನ್ ಶಿಪ್‍ನವರು. ಅವರಿಗೆ ದೃಷ್ಟಿ, ಶ್ರವಣ ಸಮಸ್ಯೆ ಇರಲಿಲ್ಲ. ನೆನಪಿನ ಶಕ್ತಿ ಕೂಡಾ ಚೆನ್ನಾಗಿತ್ತು. ಬನ್, ಮೀನು, ಹಣ್ಣುಗಳನ್ನು ಸೇವಿಸುತ್ತಿದ್ದರು. ತಮ್ಮ ದೈನಂದಿನ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.  ಇದನ್ನೂ ಓದಿ:  ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

Leave a Reply

Your email address will not be published.

Back to top button