ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

Advertisements

ಮುಂಬೈ: ನನಗೆ ಡೇಟಿಂಗ್ ಮಾಡಲು ವಯಸ್ಸಾದ ಶ್ರೀಮಂತ ಬೇಡ. ಕಷ್ಟದಲ್ಲಿರುವವನ ಜೊತೆ ನಾನು ಡೇಟಿಂಗ್ ಮಾಡಲು ಇಷ್ಟಪಡುತ್ತೇನೆ ಎಂದು ಭುವನ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಹರ್ನಾಜ್ ಸಂಧು ತಮ್ಮ ಬಾಯ್‍ಫ್ರೆಂಡ್ ಬಗ್ಗೆ ಹೇಳಿಕೊಂಡಿದ್ದಾರೆ.

Advertisements

ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಬಾಲಿವುಡ್ ಪ್ರಾಜೆಕ್ಟ್ ಮತ್ತು ಡೇಟಿಂಗ್ ವಿಚಾರವಾಗಿ ಮಾತನಾಡಿದ ಹರ್ನಾಜ್ ಸಖತ್ ಬೋಲ್ಡ್ ಆಗಿ ಉತ್ತರವನ್ನು ಕೊಟ್ಟಿದ್ದಾರೆ. ನಾನು ಕಷ್ಟದಲ್ಲಿರುವ ಯುವಕನೊಂದಿಗೆ ಡೇಟಿಂಗ್ ಮಾಡಲು ಬಯಸುತ್ತೇನೆ. ವಯಸ್ಸಾದ ಶ್ರೀಮಂತ ವ್ಯಕ್ತಿಯ ಜೊತೆಯಲ್ಲ. ಏಕೆಂದರೆ ನಾನು ಕಷ್ಟಪಟ್ಟಿದ್ದೇನೆ ಮತ್ತು ಕಷ್ಟಪಡುತ್ತೇನೆ. ಒಬ್ಬ ಮನುಷ್ಯ ಹೋರಾಟ ಮಾಡುವುದು ಮುಖ್ಯ ಎಂದು ನಾನು ನಂಬುತ್ತೇನೆ. ಆಗ ಮಾತ್ರ ನಾವು ನಮ್ಮ ಸಾಧನೆಗಳಿಗೆ ಬೆಲೆ ನೀಡಬಹುದು ಎಂದು ಹೇಳಿದರು. ಇದನ್ನೂ ಓದಿ: ವಾಜಪೇಯಿ ಜನ್ಮ ದಿನಾಚರಣೆ ಆಚರಿಸಿದ ರಮೇಶ್ ಜಾರಕಿಹೊಳಿ

Advertisements

ಗೆಲುವಿನ ಕುರಿತು ಮಾತನಾಡಿದ ಅವರು, ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಏಕೆಂದರೆ ದಿ ಮಿಸ್ ಯೂನಿವರ್ಸ್ ಈಸ್… ಎಂಬ ಸಾಲಿನೊಂದಿಗೆ ಭಾರತ ಎಂಬ ಪದ ಮೊಳಗಿದಾಗ ನಾನು ಅಳಲು ಪ್ರಾರಂಭಿಸಿದ್ದೆ. ನನ್ನ ಪ್ರಾಮಾಣಿಕತೆ ಮತ್ತು ಪರಿಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದರು.

ನಾನು ನಟಿಯಾಗಬೇಕು ಎಂದು ನಿರ್ಧರಿಸಿದ್ದೇನೆ. ಬಹಳಷ್ಟು ನಟ-ನಟಿಯರಿಂದ ನಾನು ಸ್ಫೂರ್ತಿಯನ್ನು ಪಡೆದಿದ್ದೇನೆ. ನಟನೆ ಮಾಡುವುದರಿಂದ ನನಗೆ ಖುಷಿ ಸಿಗುತ್ತೆ ಎಂದು ತಮಗಿರುವ ನಟನೆಯ ಮೇಲಿನ ಪ್ರೀತಿಯನ್ನು ಹೇಳಿಕೊಂಡರು.

Advertisements

13 ಡಿಸೆಂಬರ್ 2021 ರಂದು ಇಸ್ರೇಲ್‍ನ ಐಲಾಟ್‍ನಲ್ಲಿ ನಡೆದ ಮಿಸ್ ಯೂನಿವರ್ಸ್ 2021 ರ 70 ನೇ ಆವೃತ್ತಿಯಲ್ಲಿ ಹರ್ನಾಜ್ ‘ಭುವನ ಸುಂದರಿ ಪ್ರಶಸ್ತಿ’ ಯನ್ನು ಪಡೆದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. 24 ವರ್ಷಗಳ ನಂತರ ನಮ್ಮ ಭಾರತಕ್ಕೆ ಭುವನ ಸುಂದರಿ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

ಈ ಹಿಂದೆ ಸುಶ್ಮಿತಾ ಸೇನ್, ಐಶ್ವರ್ಯ ರೈ ಬಚ್ಚನ್, ಲಾರಾ ದತ್ತಾ ಭೂಪತಿ, ಪ್ರಿಯಾಂಕಾ ಚೋಪ್ರಾ, ದಿಯಾ ಮಿರ್ಜಾ ಮತ್ತು ಮಾನುಷಿ ಛಿಲ್ಲರ್ ಅವರು ಸಹ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು ಬಾಲಿವುಡ್‍ನಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಈಗ ಹರ್ನಾಜ್ ಅವರು ನಟಿಯಾಗಿ ದೊಡ್ಡ ಹೆಸರು ಮಾಡಬೇಕು ಎಂದು ಕನಸನ್ನು ಹೊಂದಿದ್ದು, ಈಗಾಗಲೇ ಇವರು ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisements
Exit mobile version