BelgaumDistrictsKarnatakaLatestMain Post

ವಾಜಪೇಯಿ ಜನ್ಮ ದಿನಾಚರಣೆ ಆಚರಿಸಿದ ರಮೇಶ್ ಜಾರಕಿಹೊಳಿ

Advertisements

ಬೆಳಗಾವಿ: ಭಾರತದ ಮಾಜಿ ಪ್ರಧಾನಿಗಳಾದ ಅಜಾತ ಶತ್ರು, ದೇಶ ಮೆಚ್ಚಿದ ನಾಯಕರು, ಭಾರತರತ್ನ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ದಿನಾಚರಣೆಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಆಚರಣೆ ಮಾಡಿದರು.

ಬೆಳಗಾವಿಯ ಗೋಕಾಕ್ ಮಾಜಿ ಸಚಿವರ ಸ್ವಗೃಹದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಮೇಶ್ ಜಾರಕಿಹೊಳಿ ಅವರು ಅಟಲ್ ಬಿಹಾರಿ ವಾಜಪೇಯಿ ಭಾವ ಚಿತ್ರಕ್ಕೆ ಗೌರವ ಸಲ್ಲಿಸಿದರು. ಇದನ್ನೂ ಓದಿ: ಸಿನಿಮಾರಂಗದಲ್ಲಿ ಉತ್ತಮ ನಟನಾಗಿ ಯಶಸ್ವಿಯಾಗುವ ಪ್ಲಾನ್ ಇದೆ: ನಿಖಿಲ್ ಕುಮಾರಸ್ವಾಮಿ

ಈ ಸಂದರ್ಭದಲ್ಲಿ ಬಿಜೆಪಿ ಗೋಕಾಕ್ ನಗರ ಮಂಡಲದ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಲಕ್ಕಪ್ಪ ತಹಶಿಲ್ದಾರ್, ಟಿಆರ್ ಕಾಗಲ, ಲಕ್ಕಪ್ಪ ಬಂಡಿ, ಬಸವರಾಜ ಹಿರೇಮಠ, ಲಕ್ಷ್ಮಣ ತಳ್ಳಿ, ಮಂಜುನಾಥ ಪ್ರಭುನಟ್ಟಿ, ಸುಭಾಷ್ ಸಂತಿಪ್ಪಗೋಳ, ರಾಜೇಶ್ವರಿ ಒಡೆಯರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published.

Back to top button