ಅಕ್ಕಿ ಹಿಟ್ಟಿನಿಂದ ಮಸಾಲ ಚಿಪ್ಸ್ ಮಾಡೋ ವಿಧಾನ

Public TV
1 Min Read
recipe 2

ಲಾಕ್‍ಡೌನ್‍ನಿಂದಾಗಿ ಮನೆಯಲ್ಲಿರುವುದರಿಂದ ಯಾವಾಗಲೂ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಚಿಪ್ಸ್, ಪಾನಿಪುರಿ, ಮಸಾಲ ಪುರಿ ಸೇರಿದಂತೆ ಸ್ನ್ಯಾಕ್ಸ್ ತಿನ್ನಲು ಹೊರಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಅಕ್ಕಿ ಹಿಟ್ಟಿನಿಂದ ಮಸಾಲ ಚಿಪ್ಸ್ ಮಾಡುವ ವಿಧಾನ ಇಲ್ಲಿದೆ…

ಬೇಕಾಗುವ ಸಾಮಾಗ್ರಿಗಳು
1. ಅಕ್ಕಿ ಹಿಟ್ಟು – ಒಂದು ಕಪ್
2. ಜೀರಿಗೆ – 1/2 ಟೀ ಸ್ಪೂನ್
3. ಅಜ್ವಾನ – 1/2 ಟೀ ಸ್ಪೂನ್
4. ಇಂಗು – ಚಿಟಿಕೆ
5. ಉಪ್ಪು – ರುಚಿಗೆ ತಕ್ಕಷ್ಟು
6. ತುಪ್ಪ – 1/2 ಟೀ ಸ್ಪೂನ್
7. ಎಣ್ಣೆ – ಕರಿಯಲು
8. ನೀರು

11 cornchips.600

ಮಾಡುವ ವಿಧಾನ
* ಸ್ಟೌವ್ ಮೇಲೆ ಒಂದು ಪ್ಯಾನ್ ಇಟ್ಟು, ಅರ್ಧ ಗ್ಲಾಸ್ ನೀರು ಹಾಕಿಕೊಳ್ಳಬೇಕು.
* ನೀರು ಬಿಸಿ ಆಗುತ್ತಿದ್ದಂತೆ ಜೀರಿಗೆ, ಅಜ್ವಾನ, ಇಂಗು ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ತುಪ್ಪ ಹಾಕಿ ಮಿಕ್ಸ್ ಮಾಡಿ 2 ನಿಮಿಷ ಕುದಿಸಿ.
* ಮಿಶ್ರಣ ಕುದಿಯುತ್ತಿರುವಾಗ ಸ್ಟೌವ್ ಕಡಿಮೆ ಮಾಡಿಕೊಂಡು ಅಕ್ಕಿ ಹಿಟ್ಟು ಹಾಕಿಕೊಳ್ಳಿ.
* ಸ್ಟೌವ್ ಕಡಿಮೆ ಮಾಡಿಕೊಂಡು ಮಿಶ್ರಣದ ಜೊತೆ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಬೇಕು. ನೀರಿನ ಅಂಶ ಕಡಿಮೆ ಆಗುತ್ತಿದ್ದಂತೆ ಸ್ಟೌವ್ ಆಫ್ ಮಾಡಿ. ಪ್ಯಾನ್ ಮುಚ್ಚಳ ಮುಚ್ಚಿ ಐದು ನಿಮಿಷ ಬಿಡಿ.
* ಮಿಶ್ರಣ ತಣ್ಣದಾಗದ ಕೂಡಲೇ ಚಪಾತಿ ಹಿಟ್ಟಿನ ಹದಕ್ಕೆ ನಯವಾಗಿ ಕಲಿಸಿಕೊಳ್ಳಿ.
* ಮತ್ತೊಂದು ಕಡೆ ಸ್ಟೌವ್ ಮೇಲೆ ಪ್ಯಾನ್ ಇರಿಸಿ, ಚಿಪ್ಸ್ ಕರಿಯಲು ಎಣ್ಣೆ ಹಾಕಿ ಕಾಯಲು ಬಿಡಿ.
* ಮಿಶ್ರಣವನ್ನು ಚೆನ್ನಾಗಿ ಚಪಾತಿ ರೀತಿಯಲ್ಲಿ ಮಾಡಿಕೊಳ್ಳಿ.
* ಚಪಾತಿಯನ್ನು ನಿಮಗೆ ಬೇಕಾದ ಆಕಾರ (ತ್ರಿಕೋನ/ಡೈಮಂಡ್/ಚೌಕ)ದಲ್ಲಿ ಕತ್ತರಿಸಿಕೊಳ್ಳಿ.
* ಈಗ ಕಾದ ಎಣ್ಣೆಗೆ ಕತ್ತರಿಸಿದ ಪೀಸ್‍ಗಳನ್ನು ಹಾಕಿ, ಕರೆಯಿರಿ.
* ಗೋಲ್ಡನ್ ಬ್ರೌನ್ ಬಂದ ಮೇಲೆ ಕರೆದು ಪ್ಲೇಟ್‍ನಲ್ಲಿ ಹಾಕಿ ಸರ್ವ್ ಮಾಡಿ.
* ಸರ್ವ್ ಮಾಡುವ ಮುನ್ನ ರೆಡಿಯಾದ ಚಿಪ್ಸ್ ಮೇಲೆ ಖಾರದ ಪುಡಿ, ಚಾಟ್ ಮಸಾಲ ಹಾಕಿದರೆ ತಿನ್ನಲು ಸ್ಪೈಸಿಯಾಗಿರುತ್ತೆ.

Share This Article
Leave a Comment

Leave a Reply

Your email address will not be published. Required fields are marked *