ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಹತ್ತತ್ತು ಕೆ.ಜಿ ಅಕ್ಕಿ ಖರೀದಿಸಿ ನಿರ್ವಸತಿಗರಿಗೆ ನೀಡಿದ್ದಾರೆ. ಕೋರ್ಸ್ ಮುಗಿಸಿ ಫೈವ್ ಸ್ಟಾರ್- ತ್ರೀಸ್ಟಾರ್ ಹೋಟೆಲ್‍ಗಳಿಗೆ ಸೇರುವುದಕ್ಕೆ ಮುಂಚೆ ಎಲ್ಲಾ ವಿದ್ಯಾರ್ಥಿಗಳು ನಿರ್ವಸಿತಗರಿಗೆ ಅಕ್ಕಿಯನ್ನು ನೀಡಿದ್ದಾರೆ.
Advertisement
ಮಣಿಪಾಲದ ಎಂಡ್ ಪಾಯಿಂಟ್‍ನಲ್ಲಿ ಎಲ್ಲರೂ ತಾವು ತಂದ ಅಕ್ಕಿಯನ್ನು ಒಟ್ಟುಗೂಡಿಸಿದರು. ಸುಮಾರು ಒಂದು ಸಾವಿರ ಕೆಜಿಗೂ ಹೆಚ್ಚು ಅಕ್ಕಿ ಸಂಗ್ರಹವಾಯ್ತು. ಸಂಗ್ರಹವಾದ ಅಕ್ಕಿಯನ್ನೆಲ್ಲಾ ಶಂಕರಪುರದಲ್ಲಿರುವ ನಿರ್ವಸಿತಗರ ಕೇಂದ್ರ ವಿಶ್ವಾಸದ ಮನೆಗೆ ತಲುಪಿಸಲಾಯ್ತು. ನೂರಾರು ಮಂದಿ ಇರುವ ವಿಶ್ವಾಸದ ಮನೆಯಲ್ಲಿ ಈ ಅಕ್ಕಿಯೆಲ್ಲ ಅನ್ನವಾಗಿ ಹಸಿವು ತಣಿಸಲಿದೆ. ವರ್ಷದಲ್ಲಿ ಮೂರ್ನಾಲ್ಕು ಬಾರಿ ಇಂತಹ ಸಮಾಜ ಸೇವೆಯನ್ನು ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಮಾಡುತ್ತಾರೆ.
Advertisement
Advertisement
ರೈಸ್ ಬಕೆಟ್ ಚಾಲೆಂಜ್ ಕಾನ್ಸೆಪ್ಟ್: ನಮಗೆ ಕಷ್ಟದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಆದ್ರೆ ದೇಶದಲ್ಲಿ ತುಂಬಾ ಕಷ್ಟದಲ್ಲಿರುವವರು ಇದ್ದಾರೆ. ಅವರಿಗೆ ನಮ್ಮಿಂದ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಲಿ ಎಂಬ ಉದ್ದೇಶದಿಂದ `ರೈಸ್ ಬಕೆಟ್ ಚಾಲೆಂಜ್ ಕಾನ್ಸೆಪ್ಟ್’ ಶುರು ಮಾಡಿದೆವು. ನಮ್ಮ ಸೀನಿಯರ್ಸ್ ಇದಕ್ಕೆ ಸಪೋರ್ಟ್ ಮಾಡಿದರು. ನಾವು ದ್ವಿತೀಯ ವರ್ಷಕ್ಕೆ ಹೋಗುವಾಗ ಇನ್ನೂ ಹೆಚ್ಚು ಸಹಾಯ ಮಾಡುತ್ತೇವೆ ಅಂತ ವಿದ್ಯಾರ್ಥಿನಿ ರಿಹಾನಾ ಪಬ್ಲಿಕ್ ಟಿವಿಗೆ ಹೇಳಿದ್ರು.
Advertisement