Cinema

ಮದುವೆಯ ಫೋಟೋ ಹಂಚಿಕೊಂಡ ರಿಯಾ ಕಪೂರ್, ಕರಣ್ ಬೂಲಾನಿ

Published

on

Share this

ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ 2ನೇ ಪುತ್ರಿ, ನಿರ್ಮಾಪಕಿ, ಉದ್ಯಮಿ, ಫ್ಯಾಷನ್ ಸ್ಟೈಲಿಸ್ಟ್ ರಿಯಾ ಕಪೂರ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ರಿಯಾ ಕಪೂರ್ ಹಂಚಿಕೊಂಡಿದ್ದಾರೆ.

ಆಗಸ್ಟ್ 14 ರಂದು ನೆರವೇರಿದ ರಿಯಾ ಕಪೂರ್-ಕರಣ್ ಬೂಲಾನಿ ಮದುವೆ ಸಮಾರಂಭದ ಫೋಟೋ ಈವರೆಗೂ ಬಹಿರಂಗವಾಗಿರಲಿಲ್ಲ. ಇದೀಗ ತಮ್ಮ ವಿವಾಹದ ಫೋಟೋಗಳನ್ನು ಸ್ವತಃ ನವ ದಂಪತಿ ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್

 

View this post on Instagram

 

A post shared by Karan Boolani (@karanboolani)

ನಿನ್ನೆ ನಮ್ಮ ಪ್ರೀತಿ ಅಧಿಕೃತವಾಯಿತು. ಆದರೆ ನಾನು ಮತ್ತು ನೀನು ಕಳೆದ ಒಂದು ದಶಕದಿಂದ ಪ್ರೀತಿಯಲ್ಲಿದ್ದೇವೆ. ಇದಕ್ಕಾಗಿ ನಾನು ನಾಲ್ವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಒಬ್ಬರು ಚಿತ್ರ ನಿರ್ಮಾಪಕಿ, ಎರಡನೇಯವರು ಫ್ಯಾಶನ್ ಸ್ಟೈಲಿಸ್ಟ್, ಮೂರನೇಯವರು ನನ್ನ ಮಗಳ ತಾಯಿ, ನಾಲ್ಕನೇಯವರು ಅದ್ಭುತವಾದ ಕುಕ್. ಅವರೆಲ್ಲರ ಹೆಸರೂ ರಿಯಾ ಕಪೂರ್. ಇದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ರಿಯಾ ಕಪೂರ್ ಬಗ್ಗೆ ಕರಣ್ ಬೂಲಾನಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

 

View this post on Instagram

 

A post shared by Rhea Kapoor (@rheakapoor)

ಕಳೆದ 12 ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಇಬ್ಬರ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದ್ದು, ವಿವಾಹ ಮಹೋತ್ಸವ ಜರುಗಿದೆ ಎಂದು ಬರೆದುಕೊಂಡ ರಿಯಾ ಕಪೂರ್ ತಮ್ಮ ಮದುವೆಯ ಫೋಟೋವನ್ನು ಶೇರ್‍ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement