ಬೆಂಗಳೂರು: ಎಂಎಲ್‍ಸಿ ಗೋವಿಂದರಾಜು ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಹೈಕಮಾಂಡ್‍ಗೆ ಕಪ್ಪ ಕಾಣಿಕೆ ಕೊಟ್ಟ ಬಗ್ಗೆ ಐಟಿ ಮುಂದೆ ಸತ್ಯದರ್ಶನವಾಗಿದೆ.
ಹೌದು. ಡೈರಿಯಲ್ಲಿದ್ದ ಕೋಡ್ ವರ್ಡ್ ಹೆಸರುಗಳು ಕಾಂಗ್ರೆಸ್ ನಾಯಕರದ್ದೇ ಎಂದು ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಗೋವಿಂದರಾಜು ಸತ್ಯ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಡೈರಿಯ ಪೇಜ್-3ರಲ್ಲಿರುವ ಹೆಸರುಗಳು ಕಾಂಗ್ರೆಸ್ ನಾಯಕರದ್ದು. ಎಸ್‍ಜಿ ಅಂದ್ರೆ ಸೋನಿಯಾ ಗಾಂಧಿ, ಆರ್‍ಜಿ ಅಂದ್ರೆ ರಾಹುಲ್ ಗಾಂಧಿ. ನನ್ನ ಪರ್ಸನಲ್ ಲೆಕ್ಕಚಾರಕ್ಕೆ ಬರೆದಿಟ್ಟುಕೊಂಡಿದ್ದೆ. ಇದರಲ್ಲಿ ಬೇರೇನೂ ಇಲ್ಲ. ಇದಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಐಟಿ ಅಧಿಕಾರಿಗಳಿಗೆ ಗೋವಿಂದರಾಜು ಉತ್ತರ ನೀಡಿದ್ದಾರೆ.
Advertisement
Advertisement
ಗೋವಿಂದರಾಜು ನೀಡಿರುವ ಹೇಳಿಕೆ ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಪ್ರಸಾರವಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‍ಗೆ ಕಪ್ಪ ನೀಡಿದ ಆರೋಪಕ್ಕೆ ಗೋವಿಂದರಾಜು ಹೇಳಿಕೆ ಬಲ ನೀಡಿದಂತಾಗಿದೆ.
Advertisement
ಡೈರಿಯಲ್ಲಿರುವ ಇನ್ನಿತರೆ ಕೋಡ್‍ವರ್ಡ್‍ಗಳಾದ ಕೆಜೆಜಿ ಅಂದ್ರೆ ಕೆಜೆ ಜಾರ್ಜ್ ಆಗುತ್ತದಾ? ಎಂಬಿಪಿ ಅಂದ್ರೆ ಎಂಬಿ ಪಾಟೀಲ್, ಹೆಚ್‍ಸಿಎಂ ಅಂದ್ರೆ ಹೆಚ್‍ಸಿ ಮಹಾದೇವಪ್ಪ, ಡಿಕೆಎಸ್ ಅಂದ್ರೆ ಡಿಕೆ ಶಿವಕುಮಾರ್? ಆರ್‍ವಿಡಿ ಅಂದ್ರೆ ಆರ್‍ವಿ ದೇಶಪಾಂಡೆ, ಕೆಂಪ್ ಅಂದ್ರೆ ಕೆಂಪಯ್ಯ ಅಂತಾ ಅರ್ಥನಾ? ಎಂ ವೋಹ್ರಾ ಅಂದ್ರೆ ಮೋತಿಲಾಲ್ ವೋಹ್ರಾ? ಡಿಜಿವಿಎಸ್ ಅಂದ್ರೆ ದಿಗ್ವಿಜಯ್ ಸಿಂಗ್ ಅಂತಾ ಅರ್ಥನಾ? ಎಂಬ ಪ್ರಶ್ನೆಗಳು ಮೂಡಿದೆ.
Advertisement