190 ಪುರುಷರನ್ನು ರೇಪ್‍ಗೈದಿದ್ದ ಸಲಿಂಗಕಾಮಿಗೆ ಶಿಕ್ಷೆ ಪ್ರಕಟ

Public TV
2 Min Read
Reynhard Sinaga 2

– ಕುಡಿದು ತೂರಾಡುವವರೇ ಇವನ ಟಾರ್ಗೆಟ್
– ಶಿಕ್ಷಣಕ್ಕಾಗಿ ಬಂದವನ ಬಣ್ಣ ಬಯಲು

ಲಂಡನ್: ಪುರುಷರನ್ನು ಅತ್ಯಾಚಾರಗೈದು, ಲೈಂಗಿಕ ಕಿರುಕುಳ ನೀಡಿದ್ದ 36 ವರ್ಷದ ರೆನ್ಹಾರ್ಡ್ ಸಿನಾಗಾಗೆ ಇಂಗ್ಲೆಂಡ್ ನ್ಯಾಯಾಲಯ ಜೀವಾವಧಿ ಶಿಕ್ಷೆಯ ತೀರ್ಪನ್ನು ನೀಡಿದೆ. ಸುದೀರ್ಘವಾಗಿ ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಸಿನಾಗಾ ಅನೇಕರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈತನನ್ನು ಅಪರಾಧಿ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.

Reynhard Sinaga

ಎರಡೂವರೆ ವರ್ಷದ ಅವಧಿಯಲ್ಲಿ ಸಿನಾಗಾ ಹಲವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹಲವರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡೋದಾಗಿ ಕರೆ ತರುತ್ತಿದೆ. ಕೆಲವೊಮ್ಮೆ ಮೊಬೈಲ್ ಚಾರ್ಜ್ ಗೆ ಸಹಾಯ ಮಾಡುವ ನೆಪದಲ್ಲಿ ಕರೆ ತಂದು ಅತ್ಯಾಚಾರ ಎಸಗುತ್ತಿದ್ದನು ಎಂದು ವರದಿಯಾಗಿದೆ.

ಬಾರ್ ಗಳಿಂದ ಕುಡಿದು ತೂರಾಡುತ್ತಾ ಹೊರ ಬರುವ ಯುವಕರನ್ನೇ ಸಿನಾಗಾ ಟಾರ್ಗೆಟ್ ಮಾಡುತ್ತಿದ್ದನು. ನಶೆಯಲ್ಲಿ ಇರುವ ಯುವಕರನ್ನು ಮನೆಗೆ ಕರೆ ತಂದು ರೇಪ್ ಮಾಡುತ್ತಿದ್ದನು. ಬೆಳಗ್ಗೆ ನಶೆಯಲ್ಲಿದ್ದ ನಿಮಗೆ ಆಶ್ರಯ ನೀಡಿದ್ದೇನೆ ಎಂದು ಹೇಳಿ ಕಳುಹಿಸುತ್ತಿದ್ದನು. 2017 ಜುಲೈನಲ್ಲಿ ನಶೆಯಲ್ಲಿದ್ದ 18 ವರ್ಷದ ಯುವಕನನ್ನು ಮನೆಗೆ ಕರೆ ತಂದಿದ್ದಾನೆ. ಸೆಕ್ಸ್ ಮಾಡುತ್ತಿದ್ದ ವೇಳೆ ಯುವಕ ಎಚ್ಚರಗೊಂಡಿದ್ದಾನೆ. ಕೂಡಲೇ ಆತನ ಮನೆಯಿಂದ ಹೊರ ಬಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

Reynhard Sinaga 1

ದೂರು ದಾಖಲಿಸಿಕೊಂಡ ತನಿಖೆಗಳಿದ ಪೊಲೀಸರು ಸಿನಾಗಾನನ್ನ ಬಂಧಿಸಿದ್ದಾರೆ. ಆತನ ಮೊಬೈಲ್ ನಲ್ಲಿ ಹಲವರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಫೋಟೋ ಮತ್ತು ವಿಡಿಯೋಗಳು ಲಭ್ಯವಾಗಿವೆ. ಇಷ್ಟು ಮಾತ್ರವಲ್ಲದೇ ತಾನು ಅತ್ಯಾಚಾರಗೈದ ಯುವಕರ ಹೆಸರು ಮತ್ತು ವಿಳಾಸದ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದನು. ಮ್ಯಾಂಚೆಸ್ಟರ್ ನಗರದಲ್ಲಿ 48 ಜನರ ಮೇಲೆ ಅತ್ಯಾಚಾರಗೈದಿರುವುದು ದೃಢಪಟ್ಟಿದೆ. ಆತನ ಮೊಬೈಲಿನಲ್ಲಿ ವಿಡಿಯೋ ಆಧರಿಸಿ ಸುಮಾರು 70 ಸಂತ್ರಸ್ತರನ್ನು ಪೊಲೀಸರು ಹುಡುಕುತ್ತಿದ್ದಾರೆ.

Reynhard Sinaga 4

ಪೊಲೀಸರ ಪ್ರಕಾರ ಸಿನಾಗಾ ಬರೋಬ್ಬರಿ 190 ಜನರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಹುತೇಕರಿಗೆ ತಮ್ಮ ಮೇಲೆ ನಡೆದ ಅತ್ಯಾಚಾರ ನಡೆದಿರೋದು ತಿಳಿಯದ ಕಾರಣ ಪ್ರಕರಣ ಹೊರ ಬಂದಿರಲಿಲ್ಲ. ಇಂಡೋನೇಷ್ಯಾ ಮೂಲದವನಾದ ಸಿನಾಗಾ, ಶಿಕ್ಷಣಕ್ಕಾಗಿ 2007ರಲ್ಲಿ ಇಂಗ್ಲೆಂಡ್ ಗೆ ಆಗಮಿಸಿದ್ದನು. ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಸಮಾಜ ಶಾಸ್ತ್ರದಲ್ಲಿ ಪದವಿ ಸಹ ಪಡೆದುಕೊಂಡಿದ್ದಾರೆ. ಭೂಗೋಳ ಶಾಸ್ತ್ರದಲ್ಲಿ ಡಾಕ್ಟರೇಟ್ ಮಾಡುತ್ತಿದ್ದಾಗ ಸಿನಾಗಾನ ಬಂಧನವಾಗಿದೆ.

Reynhard Sinaga 3

Share This Article
Leave a Comment

Leave a Reply

Your email address will not be published. Required fields are marked *