ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ‘ಆಪರೇಷನ್ ಜೆಡಿಎಸ್’ಗೆ ಮುಂದಾದ ಕಾಂಗ್ರೆಸ್ಸಿಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ.
ಹೌದು. ರಿವರ್ಸ್ ಆಪರೇಷನ್ ಮೂಲಕ ಕಾಂಗ್ರೆಸ್‍ಗೆ ಮಾಜಿ ಸಿಎಂ ಟಕ್ಕರ್ ಕೊಡಲು ರೆಡಿಯಾಗಿದ್ದಾರೆ. ಜೆಡಿಎಸ್ ರಿವರ್ಸ್ ಆಪರೇಷನ್‍ಗೆ ನವೆಂಬರ್ 1ರ ಮುಹೂರ್ತ ಫಿಕ್ಸ್ ಆಗಿದ್ದು, ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಜೆಡಿಎಸ್‍ಗೆ ಹೆಚ್‍ಡಿಕೆ ಕೌಂಟರ್ ನೀಡಿದ್ದಾರೆ. ಇದನ್ನೂ ಓದಿ: ಭೋಜನ ಕೂಟದಲ್ಲೂ ಆಪರೇಷನ್ ಹಸ್ತದ ಬಗ್ಗೆ ಎಚ್ಚರಿಕೆ ನೀಡಿದ ಬಿಎಸ್‍ವೈ
ಕಾಂಗ್ರೆಸ್‍ನ ಸಿ.ಎಂ ಇಬ್ರಾಹಿಂ ಜೆಡಿಎಸ್‍ಗೆ ಜಂಪ್ ಆಗೋದು ಪಕ್ಕಾ ಆಗಿದ್ದು, ನವೆಂಬರ್ 1ರ ನಂತರ ಎಂಎಲ್‍ಸಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದಾರೆ. ಮೊದಲಿಗೆ ಎಂಎಲ್‍ಸಿ ಸ್ಥಾನ, ಆಮೇಲೆ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಡಿಕೆಶಿಗಾಗಿ ಒಕ್ಕಲಿಗ ಕಾಂಗ್ರೆಸ್ ನಾಯಕರ ಸಭೆ – ಶಿವಕುಮಾರ್ ಟ್ರೆಂಡ್ ಕ್ರಿಯೇಟ್‍ಗೆ ರಣತಂತ್ರ
ಜೆಡಿಎಸ್‍ಗೆ ಬರುವ ಸಿಎಂ ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದ್ದು, ಡಿಸೆಂಬರ್‍ನಲ್ಲಿ ಇಬ್ರಾಹಿಂ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಪಟ್ಟಾಭಿಷೇಕ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಈ ಮೂಲಕ ಅಲ್ಪಸಂಖ್ಯಾತರ ವೋಟ್ ಭದ್ರ ಮಾಡಿಕೊಳ್ಳಲು ಎಚ್‍ಡಿಕೆ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂಬುದಾಗಿ ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.