ಬೆಂಗಳೂರು: ರಾಜ್ಯ ಕಾಂಗ್ರೆಸ್ ಒಕ್ಕಲಿಗ ನಾಯಕರ ಒಗ್ಗಟ್ಟಿನ ಮಂತ್ರ ಜಪಿಸಲಾಗುತ್ತಿದೆ. ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ಸಭೆಯೊಂದು ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪರೋಕ್ಷ ಬೆಂಬಲದೊಂದಿಗೆ ಕೃಷ್ಣ ಬೈರೇಗೌಡ, ಚಲುವರಾಯ ಸ್ವಾಮಿ, ಡಿಕೆ ಸುರೇಶ್ ನೇತೃತ್ವದಲ್ಲಿ ಸಭೆ ನಡೆದಿದೆ.
Advertisement
ಒಕ್ಕಲಿಗ ಸುಮುದಾಯವನ್ನ ಕಾಂಗ್ರೆಸ್ ಪಕ್ಷದ ಕಡೆಗೆ ದೊಡ್ಡ ಮಟ್ಟದಲ್ಲಿ ಸೆಳೆಯುವ ಸಲುವಾಗಿ ಈ ಸಭೆ ನಡೆದಿದೆ. ಒಕ್ಕಲಿಗ ವೋಟ್ ಬ್ಯಾಂಕ್ ಗಟ್ಟಿಪಡಿಸಿಕೊಳ್ಳಲು ಡಿಕೆಶಿ ಪರೋಕ್ಷ ಬೆಂಬಲದೊಂದಿಗೆ ನಡೆದ ಸಭೆ ಇದಾಗಿದೆ. ಜೆಡಿಎಸ್ ನ ಒಕ್ಕಲಿಗ ವೋಟ್ ಬ್ಯಾಂಕ್ ಒಡೆದು ಕಾಂಗ್ರೆಸ್ ಕಡೆ ಬರುವಂತೆ ಮಾಡಲು ಏನೇಲ್ಲಾ ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ. ಇದನ್ನೂ ಓದಿ: ಸೋಲೂರಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ
Advertisement
Advertisement
ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಸಭೆಯ ನಂತರ ಒಕ್ಕಲಿಗ ಶಾಸಕರು ಹಾಗೂ ಮುಖಂಡರುಗಳ ಭೋಜನ ಕೂಟ ನಡೆದಿದೆ. ಡಿ.ಕೆ.ಶಿವಕುಮಾರ್ ಹೊರತು ಪಡಿಸಿ ಬಹುತೇಕ ಎಲ್ಲಾ ಒಕ್ಕಲಿಗ ಕಾಂಗ್ರೆಸ್ ಮುಖಂಡರುಗಳು, ಶಾಸಕರುಗಳು ಸಂಸದರು, ಮಾಜಿ ಸಂಸದರು ಮಾಜಿ ಸಚಿವರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟ 5 ವರ್ಷಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ: ಬೊಮ್ಮಾಯಿ
Advertisement
ಡಿಕೆಶಿ ಒಕ್ಕಲಿಗ ಸಮುದಾಯಕ್ಕಷ್ಟೆ ಸೀಮಿತವಾದ ನಾಯಕ ಎಂದು ಬಿಂಬಿಸದೆ, ರಾಜ್ಯದ ಎಲ್ಲಾ ಸಮುದಾಯದ ನಾಯಕ ಎಂಬ ಟ್ರೆಂಡ್ ಕ್ರಿಯೇಟ್ ಮಾಡುವ ಬಗ್ಗೆ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಒಕ್ಕಲಿಗ ಸಮುದಾಯದಲ್ಲೂ ಡಿಕೆಶಿ ನಮ್ಮ ನಾಯಕ ಎಂಬ ಟ್ರೆಂಡ್ ಕ್ರಿಯೇಟ್ ಮಾಡುವ ಬಗ್ಗೆ ಚರ್ಚೆಯಾಗಿದೆ. ಇತರೆ ಸಮುದಾಯದಲ್ಲಿ ಡಿಕೆಶಿ ಒಕ್ಕಲಿಗ ಸಮುದಾಯಕ್ಕೆ ಸೀಮಿತವಾದ ಎಂಬ ಭಾವನೆ ಬರದಂತೆ ಟ್ರೆಂಡ್ ಸೆಟ್ ಮಾಡುವ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಜೆಡಿಎಸ್ ಮತ್ತು ಕುಮಾರಸ್ವಾಮಿಗೆ ಪರ್ಯಾಯ ಶಕ್ತಿ ಡಿಕೆಶಿ ಎಂಬುದನ್ನ ಬಿಂಬಿಸುವ ಕಾರ್ಯತಂತ್ರದ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ನಾಲ್ಕು ದಿನ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ