ಭೋಪಾಲ್: ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡವರ ಪಟ್ಟಿಯನ್ನು ವಿದ್ಯುಚ್ಛಕ್ತಿ ಇಲಾಖೆ ಪ್ರಕಟಿಸಿದೆ. ಆ ಪಟ್ಟಿಯಲ್ಲಿ ಮಧ್ಯಪ್ರದೇಶದ ಕಂದಾಯ ಮತ್ತು ಸಾರಿಗೆ ಸಚಿವ ಗೋವಿಂದ್ ಸಿಂಗ್ ರಜಪೂತ್ ಅವರ ಹೆಸರೇ ಮೊದಲ ಸ್ಥಾನದಲ್ಲಿರುವುದು ಬೆಳಕಿಗೆ ಬಂದಿದೆ.
ಪಟ್ಟಿಯಲ್ಲಿ ರಜಪೂತ್ ಅವರ ಸಹೋದರ ಗುಲಾಬ್ ಸಿಂಗ್ ರಜಪೂತ್ ಹೆಸರು ಕೂಡ ಇದೆ. ಅಷ್ಟೇ ಅಲ್ಲ ಕಲೆಕ್ಟರ್ ಬಂಗಲೆ, ಎಸ್‌ಪಿ ಕಚೇರಿ, ವೈದ್ಯರು, ನಟರು, ಸಾಮಾಜಿಕ ಕಾರ್ಯಕರ್ತರ ಹೆಸರುಗಳು ಪಟ್ಟಿಯಲ್ಲಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಮನೆಯಲ್ಲಿ ಬಂದೂಕು ಬಚ್ಚಿಟ್ಟಿದ್ದಕ್ಕೆ ಭಾರತೀಯ ವ್ಯಕ್ತಿಗೆ 6 ವರ್ಷ ಜೈಲು ಶಿಕ್ಷೆ
Advertisement
Advertisement
34,667 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗುಲಾಬ್ ಸಿಂಗ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಕಲೆಕ್ಟರ್ ಬಂಗಲೆ-11,445 ರೂ., ಎಸ್‌ಪಿ ಕಚೇರಿ-23,428 ರೂ., ಎಸ್‌ಎಎಫ್ 16 ಬೆಟಾಲಿಯನ್ ಕಚೇರಿಯಿಂದ 18,650 ರೂ. ವಿದ್ಯುತ್ ಬಿಲ್ ಬಾಕಿ ಪಾವತಿಯಾಗಬೇಕಿದೆ.
Advertisement
ಬಿಲ್ ಪಾವತಿಸುವಂತೆ ಸುಸ್ತಿದಾರರಿಗೆ ಇಲಾಖೆ ಈಗಾಗಲೇ ಎಸ್‌ಎಂಎಸ್ ಕಳುಹಿಸಿದೆ. ಬಾಕಿ ಇರುವ ಮೊತ್ತವನ್ನು ಆದಷ್ಟು ಬೇಗ ಪಾವತಿಸುವಂತೆ ಮನವಿ ಮಾಡಿದೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್
Advertisement
ವಿದ್ಯುತ್ ಬಿಲ್ ವಸೂಲಾತಿ ಕುರಿತು ಇಲಾಖೆಯ ಎಂಜಿನಿಯರ್ ಎಸ್.ಕೆ.ಸಿನ್ಹಾ ಮಾತನಾಡಿ, ಸಾಗರನಗರ ವಿಭಾಗದಲ್ಲಿ 91 ಸಾವಿರ ಗ್ರಾಹಕರಿದ್ದು, ಅವರ ಪೈಕಿ 67 ಸಾವಿರ ಮಂದಿ ಬಿಲ್ ಪಾವತಿಸಿದ್ದಾರೆ. ಉಳಿದವರಿಗೆ ಬಿಲ್ ಪಾವತಿಸುವಂತೆ ಎಸ್‌ಎಂಎಸ್ ಕಳುಹಿಸಲಾಗಿದೆ. ಕರೆ ಮಾಡಿ ಕೂಡ ತಿಳಿಸಲಾಗುವುದು. ಒಂದು ವೇಳೆ ಪಾವತಿಸದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.