– ನನ್ನ ಅಂತ್ಯದೊಳಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಿಯೇ ಸಿದ್ಧ
ಮಂಗಳೂರು: ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ (Vasantha Bangera) ರಹಸ್ಯಗಳನ್ನು ಬಿಚ್ಚಿಟ್ಟರೆ ನನ್ನನ್ನು ಕೂಡ ಸಾಯಿಸಬಹುದು ಎಂದು ಬೆಳ್ತಂಗಡಿಯ (Belthangadi) ಮಾಜಿ ಶಾಸಕ ವಸಂತ ಬಂಗೇರ (Vasantha Bangera) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಸಿಬಿಐ ತನಿಖೆಯ ದಾರಿ ತಪ್ಪಿಸಲಾಗಿತ್ತು. ನಾನು ಶಾಸಕನಾಗಿದ್ದಾಗ ಅಧಿವೇಶನದಲ್ಲಿ ಸೌಜನ್ಯ ಕೇಸ್ ಸಿಬಿಐಗೆ ವಹಿಸಲು ಆಗ್ರಹಿಸಿದ್ದೆ. ಸಿದ್ದರಾಮಯ್ಯನವರೂ ಕೆಲವರನ್ನು ತುಂಬಾ ಒಳ್ಳೆಯವರು ಎಂದು ನಂಬಿದ್ದರು. ನನ್ನನ್ನು ಕರೆದು ಹೇಳಿದ್ರು ಇದನ್ನು ಪ್ರಸ್ತಾಪ ಮಾಡಬೇಡ, ಈ ಕೇಸನ್ನು ಸಿಬಿಐಗೆ ವಹಿಸಲು ಸಾಧ್ಯವಿಲ್ಲ ಎಂದರು. ನಾನು ಸುಮಾರು 1 ಗಂಟೆಗೂ ಅಧಿಕ ಕಾಲ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೆ. ಕೇವಲ ಸೌಜನ್ಯ ಪ್ರಕರಣ ಮಾತ್ರವಲ್ಲ, ಬೆಳ್ತಂಗಡಿಯಲ್ಲಿ ನಡೆದ ಅಮಾನುಷ ಹತ್ಯೆಗಳ ಬಗ್ಗೆ ಅವರಿಗೆ ತಿಳಿಸಿದ್ದೆ. ಕೊನೆಗೆ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಿದೆ ಎಂದರು.
ಸಿಬಿಐ ತನಿಖೆಯಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನನಗಿತ್ತು. ಆದರೆ ಸಿಬಿಐ ತನಿಖೆಯ ಅರ್ಧದಲ್ಲಿ ಇದರಲ್ಲಿ ಮೋಸ ಇದೆ ಅನ್ನೋದು ನನಗೆ ತಿಳಿಯಿತು. ಅದನ್ನು ಸಾರ್ವಜನಿಕವಾಗಿ ನಿಮ್ಮ ಮುಂದೆ ಹೇಳಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ನಾನು ಪ್ರಸ್ತಾಪಿಸಿಯೇ ಸಿದ್ಧ. ಒಂದಲ್ಲ ಒಂದು ದಿನ ಕಾಲ ಬರುತ್ತದೆ. ಅವತ್ತು ಸೌಜನ್ಯ ಪ್ರಕರಣದ ದಿಕ್ಕು ತಪ್ಪಿಸಿದ್ದು ಯಾರು, ಅನ್ಯಾಯ ತೊಂದರೆ ಕೊಟ್ಟಿದ್ದು ಯಾರು ಎಂದು ಹೇಳುತ್ತೇನೆ. ಆದರೆ ನನ್ನನ್ನು ಸಾಯಿಸಿದ್ರು ಸಾಯಿಸಬಹುದು. ಅಂತೂ ನನ್ನ ಅಂತ್ಯದೊಳಗೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಿಯೇ ಸಿದ್ಧ ಎಂದು ಹೇಳಿದರು. ಇದನ್ನೂ ಓದಿ: ಸೊಂಟದ ನೋವು ಬಿಟ್ರೆ ಬೇರೆ ಏನೂ ಸಮಸ್ಯೆ ಆಗಿಲ್ಲ: ವೃಕ್ಷ ಮಾತೆಯ ಹೆಲ್ತ್ ಅಪ್ಡೇಟ್
ಸಿದ್ದರಾಮಯ್ಯನವರನ್ನು ಏಕಾಂಗಿಯಾಗಿ ಭೇಟಿಯಾಗಿ ಈ ಪ್ರಕರಣವನ್ನು ಹೇಗೆ ತನಿಖೆ ಮಾಡಬೇಕೆಂಬುದನ್ನು ಹೇಳುತ್ತೇನೆ. ಇದನ್ನು ಈ ರೀತಿ ತನಿಖೆ ಮಾಡಬೇಕು, ಇಂತವರನ್ನೇ ತನಿಖೆ ಮಾಡಬೇಕು ಎಂದು ಹೇಳುತ್ತೇನೆ. ಖಾಕಿಯವರನ್ನೂ ಕೈ ಕಾಲು ಕಟ್ಟಿ ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯನವರಿಗೆ ತಿಳಿಸುತ್ತೇನೆ. ತಪ್ಪು ಮಾಡಿದವನು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅದನ್ನು ಅನುಭವಿಸಲೇ ಬೇಕು. ಒಗ್ಗಟ್ಟಾಗಿ ಸೌಜನ್ಯ ವಿರುದ್ಧವಾದ ದೌರ್ಜನ್ಯ ಹಾಗೂ ಕೊಲೆ ವಿರುದ್ಧ ದೇಶವ್ಯಾಪಿಯಾಗಿ ಪ್ರತಿಭಟನೆಯಾಗುತ್ತದೆ. ಸೌಜನ್ಯ ಕುಟುಂಬಸ್ಥರನ್ನು ಮುಖ್ಯಮಂತ್ರಿಗಳಿಗೆ ಖುದ್ದು ನಾನೇ ಭೇಟಿ ಮಾಡಿಸಿದ್ದೇನೆ. ಮುಖ್ಯಮಂತ್ರಿಗಳಿಗೂ ಸೌಜನ್ಯ ಪ್ರಕರಣದ ಗಂಭೀರತೆ ಅರಿವಿಗೆ ಬಂದಿದೆ ಎಂದರು. ಇದನ್ನೂ ಓದಿ: ನಮ್ಮ ಸಿಂಹ ರಾಹುಲ್ ಗಾಂಧಿ ಗೆದ್ದಿದ್ದಾರೆ – ಸಂಸತ್ ಸದಸ್ಯತ್ವ ಅನರ್ಹತೆ ವಾಪಸ್ ಬೆನ್ನಲ್ಲೇ ಸಿಹಿ ಹಂಚಿ INDIA ಒಕ್ಕೂಟ ಸಂಭ್ರಮ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]