ಬೆಂಗಳೂರು: ನಿವೃತ್ತ ಯೋಧರೊಬ್ಬರಿಂದ (Retire Soldier) ಹಂತ ಹಂತವಾಗಿ 1 ಲಕ್ಷ ರೂ. ಹಣ ಹಾಕಿಸಿಕೊಂಡು ಯಾಮಾರಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಮಹೇಶ್ ವಂಚನೆಗೊಳಗಾದ ನಿವೃತ್ತ ಯೋಧ. ಮೋಸ ಮಾಡಲೆಂದೇ ವಂಚಕ MOSA1122@SBI ಯುಪಿಐ ಐಡಿ ಮಾಡಿದ್ದ. ಫೋನ್ ಮಾಡಿ ಅಕೌಂಟ್ ಚೆಕ್ ಮಾಡು ಅಂತ ಹೇಳಿದ್ದ. ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡ್ತಿದ್ದಂತೆ ಹಣ ಮಂಗಮಾಯವಾಗಿದೆ. ಇದನ್ನೂ ಓದಿ: ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ: ವಿವಾದಿತ ಹೇಳಿಕೆ ನೀಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ
Advertisement
Advertisement
ನಿವೃತ್ತ ಯೋಧ 5,499 ರೂ. ಮೌಲ್ಯದ ಸ್ಪೀಕರ್ ಬುಕ್ ಮಾಡಿದ್ದರು. ನಂತರ ಬುಕ್ಕಿಂಗ್ ಕ್ಯಾನ್ಸಲ್ ಆಗಿತ್ತು. ಮೂರು ದಿನದಲ್ಲಿ ನಿಮ್ಮ ಖಾತೆಗೆ ಹಣೆ ಜಮೆ ಆಗುತ್ತೆ ಅನ್ನೋ ಸಂದೇಶ ಕೂಡ ಬಂದಿತ್ತು. ಹಣ ಜಮೆ ಆಗದಿದ್ದಾಗ ಮಹೇಶ್ ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ ಹುಡುಕಿದ್ದರು.
Advertisement
ಕರೆ ಮಾಡಿದ ಬಳಿಕ ಮತ್ತೊಂದು ನಂಬರ್‌ನಿಂದ ವಂಚಕ ಕರೆ ಮಾಡಿದ್ದ. RUSKDESK ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಓಕೆ ಬಟನ್ ಪ್ರೆಸ್ ಮಾಡುವಂತೆ ಹೇಳಿದ್ದ. ತಕ್ಷಣಕ್ಕೆ ಅಕೌಂಟ್‌ನಿಂದ 81 ಸಾವಿರ ಹಣ ಕಡಿತಗೊಂಡಿದೆ. ಮತ್ತೆ ಕರೆ ಮಾಡಿ ವಿಚಾರಿಸಿದಾಗ ತಪ್ಪಾಗಿ ನಂಬರ್ ಟೈಪ್ ಮಾಡಿದ್ದೀರಿ ಎಂದಿದ್ದ ವಂಚಕ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ AI ಕ್ಯಾಮೆರಾ – ಇಷ್ಟಬಂದಂತೆ ವಾಹನ ಚಲಾಯಿಸಿದ್ರೆ ಬೀಳುತ್ತೆ ದಂಡ
Advertisement
ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೇ ಪದೆ ಅಕೌಂಟ್ ಪರೀಕ್ಷಿಸಲು ಹೇಳುತ್ತಿದ್ದ. ಹಂತ ಹಂತವಾಗಿ 1 ಲಕ್ಷ ರೂ. ಹಣ ಅಕೌಂಟ್‌ನಿಂದ ಮಾಯವಾಗಿದೆ. ನಿವೃತ್ತ ಯೋಧ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Web Stories