ಚಂಡೀಗಢ: ನಿವೃತ್ತ ಎಂಜಿನಿಯರ್ ತನ್ನ ಅನಿವಾಸಿ ಭಾರತೀಯ (ಎನ್ಆರ್ಐ) ಮಗಳನ್ನು ಕೊಲೆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ.
ಡೇವಿಡ್ ಮಾಸಿಹ್(60) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಎಂಜಿನಿಯರ್. ನಿಲೋಫರ್(35) ಕೊಲೆಯಾದ ಮಗಳು. ಆಕೆಗೆ ಕಬ್ಬಿಣದ ರಾಡ್ನಿಂದ ತಲೆಯ ಮೇಲೆ ಹೊಡೆದು ಕೊಲೆ ಮಾಡಿದ್ದಾನೆ.
Advertisement
ಮಾಸಿಹ್ ಖಿನ್ನತೆಯಿಂದ ಬಳಲುತ್ತಿದ್ದ ಎಂದು ತಿಳಿದು ಬಂದಿದೆ. ಆತ ಗುಲ್ಮೋಹರ್ ಅವೆನ್ಯೂದಲ್ಲಿ ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಕೆಲವು ದಿನಗಳ ಹಿಂದೆಯಷ್ಟೇ ಮಗಳು ತನ್ನ ಪೋಷಕರನ್ನು ಭೇಟಿಯಾಗಲು ಬಂದಿದ್ದಳು. ಈ ಘಟನೆ ನಡೆದಾಗ ಆಕೆಯ ತಾಯಿ ಭಾನುವಾರ ಪ್ರಾರ್ಥನೆಗಾಗಿ ಸಮೀಪದ ಚರ್ಚ್ ಗೆ ಹೋಗಿದ್ದರು. ಬಳಿಕ ಚರ್ಚ್ ಗೆ ಬರುವಂತೆ ಪತಿಗೆ ಫೋನ್ ಮಾಡಿದ್ದಾರೆ. ಆದರೆ ಮಾಸಿಹ್ ಫೋಲ್ ರಿಸೀವ್ ಮಾಡಲಿಲ್ಲ. ಇತ್ತ ಮಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ತನ್ನ ಅಳಿಯನಿಗೆ ಕರೆ ಮಾಡಿ ತಿಳಿಸಿದ್ದಾರೆ.
Advertisement
ಮೃತ ನಿಲೋಫರ್ ಪತಿ ಫೋನ್ ಮಾಡಿದ್ದಾರೆ. ಅವರ ಕರೆಯನ್ನು ರಿಸೀವ್ ಮಾಡಲಿಲ್ಲ. ಕೊನೆಗೆ ಮನೆಯ ಬಳಿ ಬಂದಾಗ ಬಾಗಿಲು ಲಾಕ್ ಆಗಿತ್ತು. ನಂತರ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಆಗ ರಕ್ತದ ಮಡುವಿನಲ್ಲಿ ಮಗಳು ಮೃತಪಟ್ಟಿದ್ದು, ಡೇವಿಡ್ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಈ ಘಟನೆಯ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ ಡಿಸಿಪಿ ಎಂ.ಎಸ್. ಭಲ್ಲೂರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv