ಮೀರತ್: ನಿವೃತ್ತ ಕರ್ನಲ್ ಮನೆಗೆ ಕಂದಾಯ ಗುಪ್ತಚರ ಮಹಾ ನಿರ್ದೇಶನಾಲಯ(ಡಿಆರ್‍ಐ) ದಾಳಿ ನಡೆಸಿ ಭಾರೀ ಪ್ರಮಾಣದ ಆಯುಧಗಳನ್ನು ವಶಪಡಿಸಿಕೊಂಡಿದೆ.
ಶನಿವಾರ ಉತ್ತರಪ್ರದೇಶದ ಮೀರತ್ ನಲ್ಲಿರುವ ನಿವೃತ್ತ ಕರ್ನಲ್ ದೇವೇಂದ್ರ ಸಿಂಗ್ ನಿವಾಸದ ಮೇಲೆ ಡಿಆರ್‍ಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ದಾಳಿ ವೇಳೆ 40 ರೈಫಲ್, 50 ಸಾವಿರ ಮದ್ದುಗುಂಡುಗಳು, ಪಿಸ್ತೂಲ್, 1 ಕೋಟಿ ರೂ. ನಗದು ಹಣ ಸಿಕ್ಕಿದೆ.
Advertisement
16 ಗಂಟೆಗಳ ಪರಿಶೀಲನೆಯಲ್ಲಿ ಕಂಟೈನರ್‍ನಲ್ಲಿ ತುಂಬಿದ್ದ 117 ಕೆಜಿ ಮಾಂಸ, ಪ್ರಾಣಿಗಳ ತಲೆಬುರಡೆಗಳು, ಕೊಂಬುಗಳು, ಚರ್ಮಗಳು ಸಿಕ್ಕಿವೆ.
Advertisement
ಬೆಳಗ್ಗೆ ದಾಳಿ ನಡೆಸಿದ್ದು, ಈ ವೇಳೆ ವಿದೇಶಿ ರೈಫಲ್ ಗಳು ಸಿಕ್ಕಿದೆ. ಈ ರೈಫಲ್‍ಗಳಿಗೆ ಯಾವುದೇ ಲೈಸನ್ಸ್ ಇಲ್ಲ. ಇದೇ ವೇಳೆ ಮಗನಾಗಿರುವ ರಾಷ್ಟ್ರಮಟ್ಟದ ಶೂಟರ್ ಪ್ರಶಾಂತ್ ಬಿಶ್ನೋಯಿ ಬಗ್ಗೆ ವಿಚಾರಿಸಿದ್ದು, ದೇವೇಂದ್ರ ಸಿಂಗ್ ಯಾವುದೇ ಮಾಹಿತಿ ನೀಡಿಲ್ಲ. ಆತ ದಾಳಿ ನಡೆದ ಬಳಿಕ ನಾಪತ್ತೆಯಾಗಿದ್ದಾನೆ ಎಂದು ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ.
Advertisement
ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ. ದಾಳಿ ನಡೆಯುವ ಕೆಲವೇ ಕ್ಷಣಗಳ ಮೊದಲು ಪ್ರಶಾಂತ್ ಬಿಶ್ನೋಯಿ ಮನೆಯಿಂದ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
Advertisement
Meerut: DRI raids at residence of retd Colonel, banned wild animal body parts, 1 cr cash & arms recovered, his son is national level shooter pic.twitter.com/3JKScjZX0B
— ANI UP (@ANINewsUP) April 30, 2017
Revenue dept's raid at Retd Colonel's house in Meerut. Watch full story
More videos https://t.co/59Uo9D2EGK#ITVideo pic.twitter.com/54AUqvJQZu
— IndiaTodayFLASH (@IndiaTodayFLASH) April 30, 2017