ಬೆಳಗಾವಿ: ರಾಜ್ಯಾದ್ಯಂತ ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಹೊಸ ವರ್ಷದ ಸಾಮೂಹಿಕ ಆಚರಣೆಗೆ ನಿರ್ಬಂಧ ಹೇರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Advertisement
ಸುವರ್ಣಸೌಧದಲ್ಲಿ ನಡೆದ ಸಭೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹೊಸ ಮಾರ್ಗಸೂಚಿ ಬಿಡುಗಡೆ ಬಗ್ಗೆ ಚರ್ಚೆ ನಡೆಸಲಾಯಿತು. ಅಲ್ಲದೆ ಕ್ರಿಸ್ ಮಸ್, ಹೊಸ ವರ್ಷ ಆಚರಣೆ ಬಗ್ಗೆಯೂ ಚರ್ಚಿಸಲಾಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಾಸ್ ಆಚರಣೆಗೆ ಅವಕಾಶವಿಲ್ಲ. ಕ್ರಿಸ್ ಮಸ್ ಗೆ ಯಾವುದೇ ನಿರ್ಬಂಧ ಇಲ್ಲ. ಎಂಜಿ ರೋಡ್ ಬ್ರಿಗೇಡ್ ರೋಡ್ ಗಳೆಲ್ಲ ಡಿಜೆ ಬ್ಯಾನ್ ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ಏಯ್ ಅಧ್ಯಕ್ಷ ಬಾರಯ್ಯ ಕೂತ್ಕೋ. ನನ್ನ ಜಿಲ್ಲೆಯಲ್ಲಿ ಯಾವುದೇ ಸಭೆ ಮಾಡ್ಬೇಡ – ಡಿಕೆಶಿಗೆ ಸಿದ್ದು ವಾರ್ನಿಂಗ್
Advertisement
Advertisement
ಒಟ್ಟಿನಲ್ಲಿ ಬಹಿರಂಗ ಹೊಸ ವರ್ಷ ಆಚರಣೆಗೆ ನಿಷೇಧ ಹೇರಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2 ರವರೆಗಿನ ನಿರ್ಬಂಧ ರಾಜ್ಯಾದ್ಯಂತ ಅನ್ವಯವಾಗಲಿದೆ. ಪಬ್ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ 50% ಅವಕಾಶ ನೀಡಲಾಗುತ್ತಿದೆ. ಇನ್ನು ಸಿಬ್ಬಂದಿಗೆ ಡಬಲ್ ಡೋಸ್ ಲಸಿಕೆ ಹಾಕಿಸಿರಬೇಕು ಎಂದು ಹೇಳಿದರು.