ಹೈದರಾಬಾದ್: 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಬನ್ಸಿಲಾಲ್‌ಪೇಟೆ ಮೆಟ್ಟಿಲು ಬಾವಿಯನ್ನು ಮರು ಸ್ಥಾಪಿಸಲಾಗುತ್ತಿದ್ದು, ಈ ವರ್ಷದ ಸ್ವಾತಂತ್ರ್ಯ ದಿನದಂದು ಸಂಪೂರ್ಣವಾಗಿ ಅಭಿವೃದ್ಧಿಗೊಳಿಸಿ ಉದ್ಘಾಟನೆ ಮಾಡಲಾಗುತ್ತದೆ ಎಂದು ತೆಲಂಗಾಣ ಪಶುಸಂಗೋಪನಾ ಸಚಿವ ಟಿ ಶ್ರೀನಿವಾಸ್ ಯಾದವ್ ತಿಳಿಸಿದ್ದಾರೆ.
ತೆಲಂಗಾಣದ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಭೋಯಿಗುಡ ಜಿಲ್ಲೆಯ ಬನ್ಸಿಲಾಲ್‌ಪೇಟೆ ತೆರೆದ ಮೆಟ್ಟಿಲು ಬಾವಿಯ ಪುನಶ್ಚೇತನ ಕಾಮಗಾರಿಗೆ ಗುರುವಾರ ಚಾಲನೆ ಸಿಕ್ಕಿದೆ. 17ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಬಾವಿಯ ನೀರು ಕಲುಷಿತವಾಗಿದ್ದು, ಅದನ್ನು ಶುದ್ಧೀಕರಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದಿಂದ ವಾಲಿದ ವಿದ್ಯುತ್ ಕಂಬ – ಆತಂಕದಲ್ಲಿ ಸವಾರರು
Advertisement
Advertisement
ಬರೋಬ್ಬರಿ 2 ಸಾವಿರ ಟನ್‌ಗಳಷ್ಟು ಹೂಳು ಹಾಗೂ ಅವಶೇಷಗಳನ್ನು ಬಾವಿಯಿಂದ ಎತ್ತಲಾಗಿದ್ದು, ನೀರಿನ ಶುದ್ಧೀಕರಣ ಮಾಡಲಾಗುತ್ತಿದೆ. ಹೈದರಬಾದ್‌ನ ಐತಿಹಾಸಿಕ ತಾಣವನ್ನು ಪ್ರಸಿದ್ಧ ಪ್ರವಾಸೋದ್ಯಮ ತಾಣವನ್ನಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹೈದರಾಬಾದ್ ಪ್ರವಾಸೋದ್ಯಮ ಸರ್ಕ್ಯೂಟ್ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಭಾರತ ಹಿಂದೂ ರಾಷ್ಟ್ರವಾಗುತ್ತಿದೆ, ಜನರಿಗೆ ಅಭದ್ರತೆ ಕಾಡುತ್ತಿದೆ: ಅನ್ಸಾರಿ