ನೆಲಮಂಗಲ: ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48 ರ ದಾಸನಪುರದ ಹೆದ್ದಾರಿಯಲ್ಲಿ ವಿದ್ಯುತ್ ಕಂಬವೊಂದು ಅಪಘಾತದಿಂದ ವಾಲಿದ್ದು, ಸವಾರರು ಸಾರ್ವಜನಿಕರು ಭಯದಲ್ಲಿ ಚಲಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಗೆ ಬೆಳಕು ನೀಡುವ ಸಲುವಾಗಿ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಕಂಪನಿ ವಿದ್ಯುತ್ ಕಂಬವನ್ನು ನೆಟ್ಟಿತ್ತು. ಅಪಘಾತವಾದ ಸಮಯದಲ್ಲಿ ಕಂಬವು ಸರ್ವೀಸ್ ರಸ್ತೆಯ ಭಾಗಕ್ಕೆ ವಾಲಿ ನಿಂತಿದ್ದು, ಮತ್ತೊಂದು ಅಪಘಾತಕ್ಕೆ ಕಾರಣವಾಗುತ್ತಿದೆ. ಇದನ್ನೂ ಓದಿ: ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ
Advertisement
Advertisement
ಬೆಂಗಳೂರು ಮಾರ್ಗವಾಗಿ ಚಲಿಸುವ ವಾಹನ ಸವಾರರ ತಲೆಯ ಮೇಲೆಯೇ ವಾಲಿರುವುದರಿಂದ ಕಂಬ ಮೇಲೆ ಬೀಳುವ ಆತಂಕದಲ್ಲಿ ಸವಾರರು ವಾಹನವನ್ನು ಚಲಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
Advertisement
Advertisement
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಕಂಪನಿ ಕೂಡಲೇ ಎಚ್ಚೆತ್ತುಕೊಳ್ಳಬೇಕು. ವಾಲಿರುವ ವಿದ್ಯುತ್ ಕಂಬವನ್ನು ಸರಿಪಡಿಸಿ ಸಾರ್ವಜನಿಕರ ಆತಂಕ ದೂರಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: 2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!