ಕ್ರಿಸ್ಮಸ್ ಮುಗಿಸಿ ನಾವೀಗ ಹೊಸ ವರ್ಷದ ಆಗಮನಕ್ಕೆ ಕಾತುರರಾಗಿದ್ದೇವೆ. ಕಹಿ, ಸಿಹಿ ಅನುಭವಗಳೊಂದಿಗೆ ನಾವು ಈ ವರ್ಷಕ್ಕೆ ವಿದಾಯ ಹೇಳುತ್ತಿದ್ದೇವೆ. ಈ ಸಂದರ್ಭ ನಾವು ಈ ವರ್ಷ ಹೆಚ್ಚು ಹೆಸರುವಾಸಿಯಾದ ಅಡುಗೆಯ ಬಗ್ಗೆ ಮಾತನಾಡಲೇ ಬೇಕು. 2022ರ ಟಾಪ್ ಗೂಗಲ್ ಸರ್ಚ್‌ನಲ್ಲಿರುವ ರೆಸಿಪಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ರೆಸಿಪಿ ಯಾವುದು ಗೊತ್ತಾ? ಹೆಸರು ಕೇಳಿದರೆ ಬಾಯಲ್ಲಿ ನೀರು ತರಿಸುವ ಪನೀರ್ ಪಸಂದ. ಇದನ್ನು ಮಾಡಲು ಸ್ವಲ್ಪ ಶ್ರಮ ಹಾಗೂ ಹೆಚ್ಚಿನ ಸಮಯ ಬೇಕು. ಆದರೆ ಇದರ ರುಚಿ ಎಂದಿಗೂ ಮರೆಯಲಾಗದಂತಹದ್ದು. ನಾವಿಂದು ರೆಸ್ಟೋರೆಂಟ್ ಸ್ಟೈಲ್‌ನ ರುಚಿಕರವಾದ ಪನೀರ್ ಪಸಂದ (Paneer Pasanda) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೀವೂ ಒಮ್ಮೆ ಇದನ್ನು ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮಸಾಲೆ ರುಬ್ಬಲು:
ಹೆಚ್ಚಿದ ಟೊಮೆಟೊ – 5
ಗೋಡಂಬಿ – 10
ಚಕ್ಕೆ – 1 ಇಂಚು
ಹಸಿ ಮೆಣಸು – 2
ಲವಂಗ – 2
ನೀರು – 1 ಕಪ್
ಹೆಚ್ಚಿದ ಈರುಳ್ಳಿ – 1 ಕಪ್
ಸ್ಯಾಂಡ್‌ವಿಚ್ ಸ್ಟಫ್‌ಗೆ:
ದಪ್ಪಗಿನ ಪನೀರ್ ತುಂಡುಗಳು – ಕೆಲವು
ತುರಿದ ಪನೀರ್ – 2 ಟೀಸ್ಪೂನ್
ಒಣ ದ್ರಾಕ್ಷಿ – 1 ಟೀಸ್ಪೂನ್
ಗೋಡಂಬಿ – 6
ಹಸಿಮೆಣಸಿಕ ಕಾಯಿ – 1
ಕೊತ್ತಂಬರಿ ಸೊಪ್ಪು – 1 ಟೀಸ್ಪೂನ್
ಪುದೀನಾ ಸೊಪ್ಪು – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – ಕಾಲು ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಕಾರ್ನ್ ಫ್ಲೋರ್ – ಅರ್ಧ ಕಪ್
Advertisement
Advertisement
ಗ್ರೇವಿ ತಯಾರಿಸಲು:
ಎಣ್ಣೆ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಪಲಾವ್ ಎಲೆ – ಕೆಲವು
ಅರಿಶಿನ ಪುಡಿ – ಕಾಲು ಟೀಸ್ಪೂನ್
ಕೊತ್ತಂಬರಿ ಪುಡಿ – ಅರ್ಧ ಟೀಸ್ಪೂನ್
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ಕಾಲು ಟೀಸ್ಪೂನ್
ಗರಂ ಮಸಾಲೆ ಪುಡಿ – ಕಾಲು ಟೀಸ್ಪೂನ್
ಕಸೂರಿ ಮೇತಿ – ಸ್ವಲ್ಪ
ಕ್ರೀಮ್ – ಸ್ವಲ್ಪ
Advertisement
ಮಾಡುವ ವಿಧಾನ:
* ಮೊದಲಿಗೆ ಗ್ರೇವಿಯ ಮಸಾಲೆ ರುಬ್ಬಬೇಕು. ಇದಕ್ಕಾಗಿ ಒಂದು ಪ್ಯಾನ್ ಅನ್ನು ಬಿಸಿ ಮಾಡಿ, ಟೊಮೆಟೊ, ಗೋಡಂಬಿ, ಚಕ್ಕೆ, ಹಸಿ ಮೆಣಸು, ಲವಂಗ ಹಾಗೂ ನೀರು ಹಾಕಿ ಚೆನ್ನಾಗಿ ಬೇಯಿಸಿ ತಣ್ಣಗಾಗಲು ಪಕ್ಕಕ್ಕಿಡಿ.
* ಈಗ ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಈರುಳ್ಳಿ ಸೇರಿಸಿ, ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ, ಬಳಿಕ ತಣ್ಣಗಾಗಲು ಬಿಡಿ.
* ಈಗ ಬೇಯಿಸಿ ತಣ್ಣಗಾದ ಪದಾರ್ಥಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ಬಳಿಕ ಪಾತ್ರೆಯಲ್ಲಿ ಹಾಕಿಡಿ.
* ಫ್ರೈ ಮಾಡಿದ ಈರುಳ್ಳಿಯನ್ನು ಈಗ ಮಿಕ್ಸರ್ ಜಾರ್‌ಗೆ ಹಾಕಿ ರುಬ್ಬಿಕೊಂಡು, ಅದನ್ನು ಪಕ್ಕದಲ್ಲಿರಿಸಿ.
* ಈಗ ಸ್ಯಾಂಡ್‌ವಿಚ್ ಸ್ಟಫ್ ತಯಾರಿಸಬೇಕು. ಇದಕ್ಕೆ ದಪ್ಪಗಿನ ಪನೀರ್ ತುಂಡುಗಳನ್ನು ತೆಗೆದುಕೊಂಡು, ತ್ರಿಕೋನಾಕಾರದಲ್ಲಿ ಕತ್ತರಿಸಿಕೊಳ್ಳಿ. ಬಳಿಕ ಅದರ ಮಧ್ಯ ಭಾಗದಲ್ಲಿ ಅಡ್ಡಕ್ಕೆ ಹಾಗೂ ಅರ್ಧಕ್ಕೆ ಕತ್ತರಿಸಿಕೊಳ್ಳಿ.
* ಒಂದು ಪಾತ್ರೆಯಲ್ಲಿ ತುರಿದ ಪನೀರ್, ಒಣ ದ್ರಾಕ್ಷಿ, ಗೋಡಂಬಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿ.
* ಈಗ ಭಾಗ ಮಾಡಿರುವ ಪನೀರ್ ಮಧ್ಯದಲ್ಲಿ ಸ್ಟಫಿಂಗ್ ಮಸಾಲೆಯನ್ನು ತುಂಬಿ ಎಲ್ಲವನ್ನೂ ಹೀಗೇ ತಯಾರಿಸಿಟ್ಟುಕೊಳ್ಳಿ.
* ಈಗ ಪನೀರ್ ಅನ್ನು ಫ್ರೈ ಮಾಡಲು ಒಂದು ಬೌಲ್‌ನಲ್ಲಿ ಕಾರ್ನ್ ಫ್ಲೋರ್ ಹಾಕಿ, ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ.
* ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ, ಪನೀರ್ ಸ್ಯಾಂಡ್‌ವಿಚ್‌ಗಳನ್ನು ಕಾರ್ನ್ಫ್ಲೋರ್ ಹಿಟ್ಟಿನಲ್ಲಿ ಅದ್ದಿ, ಬಳಿಕ ಫ್ರೈ ಮಾಡಿ.
* ಪನೀರ್ ಗೋಲ್ಡನ್ ಬ್ರೌನ್ ಬಣ್ಣ ಬರುತ್ತಿದ್ದಂತೆ ಪ್ಯಾನ್‌ನಿಂದ ತೆಗೆದು ಪಕ್ಕಕ್ಕಿಡಿ. ಎಲ್ಲಾ ಪನೀರ್ ಸ್ಯಾಂಡ್‌ವಿಚ್‌ಗಳನ್ನೂ ಹೀಗೇ ಮಾಡಿ.
* ಈಗ ಒಂದು ಬಾಣಲೆ ತೆಗೆದುಕೊಂಡು, 1 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪಲಾವ್ ಎಲೆ ಹಾಕಿ ಫ್ರೈ ಮಾಡಿ.
* ಈಗ ರುಬ್ಬಿಕೊಂಡ ಈರುಳ್ಳಿ ಮತ್ತು ಟೊಮೆಟೊ ಪೇಸ್ಟ್ ಸೇರಿಸಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಕಾಶ್ಮೀರಿ ಕೆಂಪು ಮೆಣಸಿನ ಪುಡಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿ.
* ಬಳಿಕ ಸಕ್ಕರೆ, ಗರಂ ಮಸಾಲೆ ಪುಡಿ, ಕಸೂರಿ ಮೇತಿ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಈಗ ನೀವು ಕ್ರೀಮ್ ಸೇರಿಸಿ, ಉರಿಯನ್ನು ಆಫ್ ಮಾಡಿ, ಫ್ರೈ ಮಾಡಿಟ್ಟ ಸ್ಯಾಂಡ್‌ವಿಚ್ ಸೇರಿಸಿ.
* ರುಚಿಕರವಾದ ಪನೀರ್ ಪಸಂದ ತಯಾರಾಗಿದ್ದು, ಇದನ್ನು ನೀವು ನಾನ್, ರೋಟಿ, ಚಪಾತಿ, ಪರೋಟಾ, ತುಪ್ಪದ ಅನ್ನ, ಪಲಾವ್‌ನೊಂದಿಗೂ ಸವಿಯಬಹುದು.