ಮನೆಯಲ್ಲೇ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ತಯಾರಿಸಿ

Public TV
1 Min Read
Carrot Soup 2

ಪ್ರತಿದಿನ ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದ್ದು. ಅದರಲ್ಲೂ ಕ್ಯಾರೆಟ್‌ ಸೂಪ್‌ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಹೌದು, ಕ್ಯಾರೆಟ್‌ ಸೂಪ್‌ನಲ್ಲಿ ಅಧಿಕ ಪ್ರೋಟಿನ್‌ ಅಂಶವಿದೆ. ಈ ಕ್ಯಾರೆಟ್ ಸೂಪ್‌(Carrot Soup) ಸವಿಯಲು ನೀವು ರೆಸ್ಟೋರೆಂಟ್‌ ಹೋಗಬೇಕು ಎಂದೇನಿಲ್ಲಾ. ರುಚಿ ರುಚಿಯಾದ, ಆರೋಗ್ಯಕರವಾದ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ಮಾಡೋದು ಹೇಗೆ ಅಂತಾ ನಾವು ಹೇಳಿಕೊಡುತ್ತೇವೆ.

Carrot Soup

ಬೇಕಾಗಿರುವ ಸಾಮಾಗ್ರಿಗಳು:
ಎಣ್ಣೆ – 2 ಟೇಬಲ್‌ ಸ್ಪೂನ್‌
ಬೆಳ್ಳುಳ್ಳಿ – 2
ಕ್ಯಾರೆಟ್ – 4
ಆಲೂಗಡ್ಡೆ – ½
ಶುಂಠಿ – ½
ಈರುಳ್ಳಿ – ½
ಉಪ್ಪು – ಸ್ವಲ್ಪ
ಪುದೀನ ಸೊಪ್ಪು – ಸ್ವಲ್ಪ
ಕರಿ ಮೆಣಸು – ½ ಟೀಸ್ಪೂನ್

ಮಾಡುವ ವಿಧಾನ:
* ಮೊದಲನೆಯದಾಗಿ, ಪ್ರೆಶರ್ ಕುಕ್ಕರ್‌ಗೆ 2 ಟೇಬಲ್‌ ಸ್ಪೂನ್‌ ಎಣ್ಣೆ ಹಾಕಿ, 2 ಬೆಳ್ಳುಳ್ಳಿ ಮತ್ತು 1 ಇಂಚು ಶುಂಠಿಯನ್ನು ಹಾಕಿ.
* ಬಳಿಕ ½ ಈರುಳ್ಳಿ ಹಾಕಿ ಒಂದು ನಿಮಿಷ ಫ್ರೈ ಮಾಡಿ.
* ಈಗ 4 ಕ್ಯಾರೆಟ್, ¼ ಆಲೂಗಡ್ಡೆ ಮತ್ತು 1 ಟೀಸ್ಪೂನ್ ಉಪ್ಪು ಹಾಕಿ.
* 2 ಕಪ್ ನೀರು ಮತ್ತು 6 ಎಸಳು ಪುದೀನ ಎಲೆಗಳನ್ನು ಸೇರಿಸಿ.
* ಕುಕ್ಕರ್‌ ಮುಚ್ಚಿ 4 ಸೀಟಿ ಹೊಡೆಸಿ, ಅಂದರೆ ಕ್ಯಾರೆಟ್ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.
* ಬೆಂದ ನಂತರ ಕುಕ್ಕರ್‌ನಿಂದ ಪುದೀನ ಎಲೆಗಳನ್ನು ತೆಗೆದುಹಾಕಿ.
* ತಣ್ಣಗಾದ ಬಳಿಕ ಬೇಯಿಸಿದ ತರಕಾರಿಗಳನ್ನು ಬ್ಲೆಂಡರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಬೇಯಿಸಿದ ತರಕಾರಿಯಲ್ಲಿ ಉಳಿದಿರುವ ನೀರನ್ನು ಹಾಗೂ ರುಬ್ಬಿಕೊಂಡ ಪೇಸ್ಟ್ ಅನ್ನು ಕಡಾಯಿಗೆ ವರ್ಗಾಯಿಸಿ.
* 2 ನಿಮಿಷಗಳ ಸೂಪ್ ದಪ್ಪವಾಗುವವರೆಗೆ ಕುದಿಸಿ.
* ಬಳಿಕ ಇದಕ್ಕೆ ಸ್ವಲ್ಪ ಕರಿ ಮೆಣಸಿನ ಪುಡಿ ಸೇರಿಸಿ.
* ಈಗ ರುಚಿಯಾದ, ಆರೋಗ್ಯಕರವಾದ ಕ್ಯಾರೆಟ್ ಸೂಪ್ ಸವಿಯಲು ಸಿದ್ಧ.

Share This Article