ಭುವನೇಶ್ವರ: ಹೋಟೆಲ್‍ನಲ್ಲಿ (Restaurant) ಆಹಾರದ ರುಚಿ ಹಾಗೂ ಬೆಲೆಗೆ (Price) ಸಂಬಂಧಿಸಿ ನಡೆದ ಜಗಳದಲ್ಲಿ ಮಾಲೀಕನೊಬ್ಬ (Owner) ಗ್ರಾಹಕನ (Customer) ಮೇಲೆ ಬಿಸಿ ಎಣ್ಣೆ (Hot Oil) ಸುರಿದಿರುವ ಘಟನೆ ಓಡಿಶಾದ (Odisha) ಜಾಜ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.
ಬಲಿಚಂದ್ರಾಪುರ ಗ್ರಾಮದ ನಿವಾಸಿ ಪ್ರಸಂಜಿತ್ ಪರಿದಾ (48) ಊಟ ಮಾಡಲೆಂದು ಸ್ಥಳೀಯ ಮಾರುಕಟ್ಟೆಯಲ್ಲಿರುವ ಹೋಟೆಲ್‍ವೊಂದಕ್ಕೆ ತೆರಳಿದ್ದ. ಈ ವೇಳೆ ಊಟ ಚೆನ್ನಾಗಿಲ್ಲ ಎಂದು ಅಲ್ಲಿನ ಹೋಟೆಲ್ ಮಾಲೀಕ ಪ್ರವಾಕರ ಸಾಹೂಗೆ ದೂರು ನೀಡಿದ್ದಾನೆ. ಈ ವೇಳೆ ಆಹಾರದ ಬೆಲೆಯ ವಿಚಾರವಾಗಿಯೂ ಗಲಾಟೆ ನಡೆದಿದೆ.
ಇದರಿಂದ ಕೋಪಗೊಂಡ ಸಾಹೂ, ಪರಿದಾ ಮೇಲೆ ಬಿಸಿ ಎಣ್ಣೆ ಸುರಿದಿದ್ದಾನೆ. ಈ ವೇಳೆ ಪರಿದಾನ ಮುಖ, ಕುತ್ತಿಗೆ, ಎದೆ, ಹೊಟ್ಟೆ ಹಾಗೂ ಕೈಗಳು ಸುಟ್ಟು ಹೋಗಿದೆ. ತಕ್ಷಣ ಪರಿದಾನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: RSS ಸಾಧನದಂತೆ ರಾಜ್ಯಪಾಲರು ಕಾರ್ಯ ನಿರ್ವಹಿಸ್ತಿದ್ದಾರೆ: ಪಿಣರಾಯಿ ವಾಗ್ದಾಳಿ
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಸದ್ಯ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲು ಮಾಡ್ಬಾರ್ದು ಅಂತ ಚಿತ್ರ ವಿಚಿತ್ರ ಕಿರೀಟ ಹಾಕಿಸಿ ಪರೀಕ್ಷೆ ಬರೆಸಿದ್ರು