ನವದೆಹಲಿ: ಹಳೆಯ ರೈಲ್ವೆ ಕೋಚ್‍ನ್ನು ಕೇಂದ್ರ ರೈಲ್ವೆ ವಲಯವು ರೆಸ್ಟೋರೆಂಟ್ ಆಗಿ ಮಾರ್ಪಾಡು ಮಾಡಿದೆ. ನಾಗ್ಪುರ ರೈಲು ನಿಲ್ದಾಣದಲ್ಲಿರುವ (Restaurant on wheels) ಈ ವಿಶೇಷ ರೆಸ್ಟೋರೆಂಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹೊಸ ಪರಿಕಲ್ಪನೆಯ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನ ಜರ್ದೋಶ್ ಟ್ವೀಟ್ ಮಾಡಿದ್ದು, ನಾಗ್ಪುರ ರೈಲು ನಿಲ್ದಾಣದಲ್ಲಿ ಭಾರತೀಯ ರೈಲ್ವೆ ತಂದಿರುವ ರೆಸ್ಟೋರೆಂಟ್ ಆನ್ ವೀಲ್ಸ್ ಮೂಲಕ ಕೋಚ್‍ನೊಳಗೆ ಅನನ್ಯ ಭೋಜನದ ಅನುಭವವನ್ನು ಆನಂದಿಸಿ. ನೀವು ಭೇಟಿ ನೀಡಿದಾಗ ನಿಮ್ಮ ಫೋಟೋಗಳನ್ನು ಹಂಚಿಕೊಳ್ಳಲು ಮರೆಯಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಈ ಹೊಸ ಯೋಜನೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ- JDS ವಿರುದ್ಧ ದತ್ತ ಅಸಮಾಧಾನ
Presenting to you, the first of its kind – ‘Restaurant on Wheels’ at Nagpur Railway Station.
Enjoy a unique dining experience, inside a railway coach in Nagpur brought to you by @RailMinIndia
Don’t forget to share your photos when you visit it the next time.#IndianRailways pic.twitter.com/QvO2oJ9PHl
— Darshana Jardosh (@DarshanaJardosh) February 3, 2022
ನಾಗ್ಪುರ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ ರಿಚಾ ಖರೆ ಮಾತನಾಡಿ, ನಾವು ಹಳೆಯ ಕೋಚ್ ಅನ್ನು ರೆಸ್ಟೋರೆಂಟ್ ಆಗಿ ಅಭಿವೃದ್ಧಿಪಡಿಸಲು ಟೆಂಡರ್ ಕರಿದಿದ್ದೇವೆ. ಗ್ರಾಹಕರಿಗೆ ಈ ರೆಸ್ಟೋರೆಂಟ್ ಇಷ್ಟವಾಗುತ್ತದೆ. ಈ ರೆಸ್ಟೋರೆಂಟ್‍ಗಳನ್ನು ನಾವು ಇತರ ಜಿಲ್ಲೆಗಳಲ್ಲಿ ಆರಂಭಿಸಬೇಕು ಎನ್ನುವ ಯೋಜನೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ
ಇದೊಂದು ಸುಂದರವಾದ ಪರಿಕಲ್ಪನೆಯಾಗಿದೆ. ಇಲ್ಲಿ ಆಹಾರ, ತಂಪು ಪಾನೀಯಗಳು ಎಲ್ಲವೂ ಲಭ್ಯವಿದೆ. ಇದು ತ್ರಿ ಸ್ಟಾರ್ ಅಥವಾ ಪಂಚತಾರಾ ರೆಸ್ಟೋರೆಂಟ್‍ನಂತೆ ಕಾಣುತ್ತದೆ ಎಂದು ಗ್ರಾಹಕರೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.