ವಾಷಿಂಗ್ಟನ್: ಹಿಂದೂ ದೇವಾಲಯಗಳ (Hindu Temples) ಮೇಲಿನ ದಾಳಿ ಹಾಗೂ ಹಿಂದೂ ವಿರೋಧಿ ಅಪರಾಧಗಳನ್ನು ಖಂಡಿಸುವ ನಿರ್ಣಯವನ್ನು ಭಾರತೀಯ-ಅಮೆರಿಕನ್ (Indian Americans) ಶಾಸಕರೊಬ್ಬರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಮಂಡಿಸಿದ್ದಾರೆ.
ನಿರ್ಣಯ ಮಂಡಿಸಿದ ಕಾಂಗ್ರೆಸ್‌ನ (Congress) ಥಾನೇದಾರ್, ದೇಶದಲ್ಲಿ ಹಿಂದೂ ಅಮೆರಿಕನ್ನರ ಬಗ್ಗೆ ತಪ್ಪಾಗಿ ಬಿಂಬಿಸಲಾಗುತ್ತಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಬೆದರಿಕೆ ಹಾಕಲಾಗುತ್ತಿದೆ. ಹಿಂದೂ ಅಮೆರಿಕನ್ನರು ತಾರತಮ್ಯ ಮತ್ತು ದ್ವೇಷದ ಭಾಷಣಕ್ಕೆ ಗುರಿಯಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇರಾನ್, ಇಸ್ರೇಲ್‍ಗೆ ಪ್ರಯಾಣಿಸದಂತೆ ನಾಗರಿಕರಿಗೆ ಕೇಂದ್ರದ ಸಲಹೆ
Advertisement
Advertisement
1900 ರಿಂದಲೂ 40 ಲಕ್ಷಕ್ಕೂ ಹೆಚ್ಚು ಹಿಂದೂಗಳು ದೇಶದಲ್ಲಿ ನೆಲೆ ಕಂಡುಕೊಂಡಿದ್ದಾರೆ. ದೇಶವು ವೈವಿಧ್ಯಮಯ ಜನಾಂಗೀಯ, ಭಾಷಾ ಮತ್ತು ಜನಾಂಗೀಯ ಹಿನ್ನೆಲೆಗಳನ್ನು ಪ್ರತಿನಿಧಿಸುತ್ತದೆ. ದೇಶದ ಆರ್ಥಿಕತೆ ಹಾಗೂ ಪ್ರತಿಯೊಂದು ಉದ್ಯಮದಲ್ಲಿ ಹಿಂದೂ ಅಮೆರಿಕನ್ನರ ಕೊಡುಗೆ ಹೆಚ್ಚಿದೆ. ಈ ನಿಟ್ಟಿನಲ್ಲಿ ನಿರ್ಣಯವು ಸಹಕಾರಿಯಾಗಲಿದೆ ಎಂದು ಉಲ್ಲೇಖಿಸಲಾಗಿದೆ.
Advertisement
Advertisement
ನ್ಯೂಯಾರ್ಕ್‌ನಿಂದ ಹಿಡಿದು ಕ್ಯಾಲಿಫೋರ್ನಿಯಾ ವರೆಗೂ ಮಂದಿರಗಳ ಮೇಲಿನ ದಾಳಿಗಳು ಹಿಂದೂ ಅಮೆರಿಕನ್ನರಲ್ಲಿ ಆತಂಕವನ್ನು ಹೆಚ್ಚಿಸಿವೆ. ಭಯ ಹಾಗೂ ಬೆದರಿಕೆಗಳಿಂದಲೇ ನಾಗರಿಕರು ಜೀವನ ನಡೆಸುವಂತಾಗಿದೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿದ್ದ ಮತೀನ್ ಬಾಂಬ್ ಸ್ಫೋಟದ ಸೂತ್ರಧಾರ!