ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಲೈಸೆನ್ಸ್ ನಿಯಮಾವಳಿ ಉಲ್ಲಂಘಿಸಿದ್ದಕ್ಕೆ ಬಂಧನ್ ಬ್ಯಾಂಕಿಗೆ 1 ಕೋಟಿ ರೂ. ದಂಡವನ್ನು ಹಾಕಿದೆ.
2014ರಲ್ಲಿ ಬಂಧನ್ ಬ್ಯಾಂಕಿಗೆ ಆರ್ ಬಿಐ ಸಾಮಾನ್ಯ ಬ್ಯಾಂಕಿಂಗ್ ಲೈಸೆನ್ಸ್ ನೀಡಿತ್ತು. 2015 ಆಗಸ್ಟ್ ನಲ್ಲಿ ಪೂರ್ಣ ರೂಪದಲ್ಲಿ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಬಂಧನ್ ಬ್ಯಾಂಕ್ ತೊಡಗಿಕೊಂಡಿತ್ತು. ಆರ್ ಬಿಐ ಲೈಸೆನ್ಸ್ ನಿಯಮಾವಳಿಗಳ ಪ್ರಕಾರ, ಬ್ಯಾಂಕಿಂಗ್ ವ್ಯವಹಾರ ಆರಂಭಿಸಿದ ಮೊದಲ ಮೂರು ವರ್ಷ ಪ್ರಮೋಟರ್ ಗಳ ಪಾಲುದಾರಿಕೆ ಶೇ.40ಕ್ಕಿಂತ ಕಡಿಮೆ ಇರಬೇಕಿತ್ತು.
Advertisement
Advertisement
ಆಗಸ್ಟ್ 2018ರವರೆಗೆ ಬಂಧನ್ ಬ್ಯಾಂಕ್ ಪ್ರಮೋಟರ್ ಪಾಲುದಾರಿಕೆಯನ್ನು ಶೇ.40ಕ್ಕಿಂತ ಕಡಿಮೆ ಕಾಯ್ದುಕೊಳ್ಳಬೇಕಿತ್ತು. ಆದರೆ ಬಂಧನ್ ಬ್ಯಾಂಕಿನ ಪ್ರಮೋಟರ್ ಪಾಲು ಶೇ.82ರಷ್ಟಿತ್ತು. ಇತ್ತೀಚೆಗೆ ಬ್ಯಾಂಕ್ ಹೋಮ್ ಫೈನಾನ್ಸ್ ಜೊತೆ ಮರ್ಜ್ ಆಗಿದೆ. ವಿಲೀನ ಬಳಿಕ ಪ್ರಮೋಟರ್ ಶೇರುಗಳ ಪಾಲುದಾರಿಕೆ ಶೇ.82.26 ರಿಂದ ಶೇ.60.96ಕ್ಕೆ ಇಳಿದಿದೆ. ಆರ್ ಬಿಐ ಲೈಸೆನ್ಸ್ ನಿಯಮಗಳ ಪ್ರಕಾರ ಪ್ರಮೋಟರ್ ಪಾಲುದಾರಿಕೆ ಶೇ.40ಕ್ಕಿಂತ ಹೆಚ್ಚಿದೆ.
Advertisement
Advertisement
ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಪುಣೆಯ ಜನತಾ ಸಹಕಾರಿ ಬ್ಯಾಂಕಿಗೆ 1 ಕೋಟಿ ರೂ. ಮತ್ತು ಜಲಗಾಂವ್ ಪೀಪಲ್ಸ್ ಸಹಕಾರಿ ಬ್ಯಾಂಕಿಗೆ 25 ಲಕ್ಷ ರೂ. ದಂಡ ವಿಧಿಸಿದೆ. ತಮಿಳುನಾಡಿನ ಮರ್ಕನ್‍ಟಾಯಿಲ್ ಬ್ಯಾಂಕಿಗೂ ಸಹ ಆರ್ ಬಿಐ 35 ಲಕ್ಷ ರೂ. ದಂಡ ವಿಧಿಸಿದೆ. ಕ್ಲಾಸಿಫಿಕೇಶನ್ ಮತ್ತು ನೋಟಿಫಿಕೇಶನ್ ನಿಯಮಗಳ ಉಲ್ಲಂಘಿಸಿದ್ದಕ್ಕೆ ಆರ್‍ಬಿಐ ದಂಡ ವಿಧಿಸಿದೆ.