ಮುಂಬೈ: ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಗಳಿಂದ ಬಾಂಬ್ ಬೆದರಿಕೆ ಬಂದಿದೆ. ಕಳೆದ ಒಂದು ತಿಂಗಳಲ್ಲಿ ಇದು 2ನೇ ಬೆದರಿಕೆಯಾಗಿದೆ.
ಡಿ.12 ರಂದು ಆರ್‌ಬಿಐ ಇಮೇಲ್‌ಗೆ ದುಷ್ಕರ್ಮಿಗಳು ರಷ್ಯನ್ ಭಾಷೆಯಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ತಿಂಗಳ ಹಿಂದೆಯಷ್ಟೇ ಆರ್‌ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೆ ಬೆದರಿಕೆ ಕರೆ ಬಂದಿತ್ತು.ಇದನ್ನೂ ಓದಿ: ದೆಹಲಿಯಲ್ಲಿನ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ
Advertisement
Advertisement
ಸದ್ಯ ಮುಂಬೈನ ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮೇಲ್ ಕಳುಹಿಸಿದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
ಬೆದರಿಕೆ ಇಮೇಲ್ ಕುರಿತು ಮಾತನಾಡಿರುವ ಮುಂಬೈ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೆದರಿಕೆ ಇಮೇಲ್ ಬಂದಿದೆ. ಇಮೇಲ್ ರಷ್ಯನ್ ಭಾಷೆಯಲ್ಲಿದೆ ಮತ್ತು ಬ್ಯಾಂಕ್ಅನ್ನು ಸ್ಫೋಟಿಸುವ ಎಚ್ಚರಿಕೆ ನೀಡಲಾಗಿದೆ. ಮೇಲ್ ಕಳುಹಿಸಲು VPN ಅನ್ನು ಬಳಸಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಜೊತೆಗೆ ಇಮೇಲ್ ಕಳುಹಿಸಿದವರ IP ವಿಳಾಸವನ್ನು ಸಹ ಪತ್ತೆಹಚ್ಚುತ್ತಿದ್ದಾರೆ ಎಂದು ಹೇಳಿದರು.
Advertisement
ಇದಕ್ಕೂ ಮುನ್ನ ನ.16 ರಂದು, ಲಷ್ಕರ್ ಉಗ್ರರ ಹೆಸರಲ್ಲಿ ಆರ್‌ಬಿಐನ ಗ್ರಾಹಕ ಸೇವಾ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು, ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ನಾನು ಲಕ್ಷರ್ ಇ ತೊಯ್ಬಾ ಗುಂಪಿನ ಸಿಇಓ ಎಂದು ಹೇಳಿ, ಹಾಡನ್ನು ಹಾಡಿದ್ದರು. ಬಳಿಕ ಬಾಂಬ್ ಬೆದರಿಕೆ ಹಾಕಿದ್ದರು. ಜೊತೆಗೆ 2008ರಲ್ಲಿ ಇದೇ ಗುಂಪು ಮುಂಬೈನಲ್ಲಿ ದಾಳಿ ನಡೆಸಿತ್ತು.
ಇತ್ತೀಚಿಗಷ್ಟೇ ಶಕ್ತಿಕಾಂತ ದಾಸ್ ಅವರು ಆರು ವರ್ಷಗಳ ನಂತರ ಅಧಿಕಾರದಿಂದ ನಿವೃತ್ತಿಯಾದರು. ಇದೀಗ ಅವರ ಬದಲಿಗೆ ಆರ್‌ಬಿಐನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ವಹಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಬಾಂಬ್ ಬೆದರಿಕೆ ಬಂದಿದೆ.ಇದನ್ನೂ ಓದಿ:ಬಿಜೆಪಿ ಸರ್ಕಾರ ಪಂಚಮಸಾಲಿಗರಿಗೆ ಟೋಪಿ ಹಾಕಿದ್ದಾರೆ – ಸಿದ್ದರಾಮಯ್ಯ