ಬೆಂಗಳೂರು: ಮೀಸಲಾತಿ (Reservation) ವಿಚಾರದಲ್ಲಿ ರಾಜ್ಯ ಸರ್ಕಾರ ಜಾಣತನದ ಹೆಜ್ಜೆ ಇಡುವ ಮೂಲಕ ಗೊಂದಲ ಸೃಷ್ಟಿ ಮಾಡಿದೆ. ಈ ಮೀಸಲಾತಿ ಕೇವಲ ಶಿಕ್ಷಣ (Education) ಮತ್ತು ಉದ್ಯೋಗಕ್ಕೆ (Job) ಮಾತ್ರ ಅನ್ವಯ ಆಗಲಿದೆ. ಆದ್ರೆ, ರಾಜಕೀಯವಾಗಿ ಈ ಮೀಸಲಾತಿ ಅನ್ವಯ ಆಗಲ್ಲ ಎಂದು ಸರ್ಕಾರ ತಿಳಿಸಿದೆ.
Advertisement
ಕೇಂದ್ರ ಸರ್ಕಾರದ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ (EWS) ಪ್ರಮಾಣದಿಂದ 6 ಅಥವಾ 7% ಮೀಸಲಾತಿಯನ್ನು ಕಿತ್ತು ಲಿಂಗಾಯತ (Lingayats), ಒಕ್ಕಲಿಗ (Vokkaliga) ಸಮುದಾಯಕ್ಕೆ ಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2D ಮೀಸಲಾತಿ – ಸಂಪುಟ ಸಭೆಯಲ್ಲಿ ನಿರ್ಧಾರ
Advertisement
Advertisement
ಹೊಸದಾಗಿ 2(C) ಹಾಗೂ 2(D) ಪ್ರವರ್ಗಗಳನ್ನು ಸೃಷ್ಟಿ ಮಾಡಲಾಗಿದ್ದು, EWSನಲ್ಲಿ ಉಳಿದ ಮೀಸಲಾತಿಯನ್ನು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಈಗಿರುವ ಇತರೆ ವರ್ಗಗಳ ಮೀಸಲಾತಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ ಎಂದು ಸರ್ಕಾರ ಹೇಳಿದೆ. 3(A)ನಲ್ಲಿದ್ದ ಒಕ್ಕಲಿಗ ಸಮುದಾಯವನ್ನು 2(C)ಗೆ ಹಾಗೂ 3(B)ಯಲ್ಲಿದ್ದ ಲಿಂಗಾಯತರನ್ನು 2(D)ಗೆ ತರಲಾಗಿದೆ. ಆದ್ರೆ, ಮೀಸಲಾತಿ ಪ್ರಮಾಣ ಯಾರಿಗೆಷ್ಟು ಅನ್ನೋದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಅಲ್ಲದೆ, ಪಂಚಮಸಾಲಿ ಸಮುದಾಯಕ್ಕೆ ಇಂತಿಷ್ಟೇ ಮೀಸಲಾತಿ ಎಂಬುದರ ಬಗ್ಗೆಯೂ ಸ್ಪಷ್ಟವಾದ ಮಾಹಿತಿ ಕೊಟ್ಟಿಲ್ಲ. ಇದನ್ನೂ ಓದಿ: ಮೀಸಲಾತಿ ಸಿಕ್ಕಿದೆ ಎಂದು ಹಿಗ್ಗುವುದು ಬೇಡ, ಸಿಕ್ಕಿಲ್ಲ ಎಂದು ಕುಗ್ಗುವುದು ಬೇಡ: ಜಯಮೃತ್ಯುಂಜಯ ಸ್ವಾಮೀಜಿ