ಸ್ಯಾಂಟಿಯಾಗೊ: 7.5 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕಿತ್ತು ಎನ್ನಲಾಗುತ್ತಿರುವ ಡೈನೋಸಾರ್ ಒಂದರ 80% ದಷ್ಟು ಅಸ್ತಿಪಂಜರ ಪತ್ತೆಯಾಗಿದೆ.
ಚಿಲಿಯ ಪ್ಯಾಟಗೋನಿಯಾದಲ್ಲಿ ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಸಂಶೋಧನೆಯ ಮಾಹಿತಿಯನ್ನು ಇತ್ತೀಚೆಗೆ ಪ್ಯಾಲಿಯಂಟಾಲಜಿಸ್ಟ್ ಗಳು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಈ ಡೈನೋಸಾರ್‌ನ ಬಾಲ ವಿಭಿನ್ನವಾಗಿದ್ದು, ಹೊಸದೊಂದು ಪ್ರಭೇಧದ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
Advertisement
ಇದು ಡೈನೋಸಾರ್‌ನ ಹೊಸ ಪ್ರಭೇದ ಎಂಬುದಾಗಿ ಗುರುತಿಸಲಾಗಿದೆ. ಇದರ ಬಾಲ ಇಲ್ಲಿಯ ವರೆಗೆ ಗುರುತಿಸಲಾಗಿರುವ ಪ್ರಭೇದಗಳಿಗಿಂತಲೂ ಭಿನ್ನವಾಗಿದೆ ಎಂಬುದನ್ನು ಕಂಡುಹಿಡಿದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ 7 ಜನರಿಗೆ ಓಮಿಕ್ರಾನ್ ಪತ್ತೆ – 12ಕ್ಕೆ ಏರಿದ ಕೇಸ್
Advertisement
Advertisement
ಈ ಹೊಸ ಜಾತಿಯ ಡೈನೋಸಾರ್ ಅನ್ನು ಸ್ಟೆಗೌರೋಸ್ ಎಲೆಂಗಸ್ಸೆನ್ ಎಂದು ಕರೆಯಲಾಗಿದ್ದು, ಇದರ ಪಳೆಯುಳಿಕೆಯನ್ನು 2018ರಲ್ಲಿ ಕಂಡುಹಿಡಿಯಲಾಗಿತ್ತು. ಹೊಸ ರೀತಿಯ ದೇಹ ರಚನೆಯುಳ್ಳ ಡೈನೋಸಾರ್‌ನ ಪತ್ತೆಯಾಗಿರವುದು ನಿಜವಾಗಿಯೂ ಅದ್ಭುತ ಎಂದು ಸಂಶೊಧಕ ಅಲೆಗ್ಸಾಂಡರ್ ವರ್ಗಾಸ್ ತಿಳಿಸಿದ್ದಾರೆ.
Advertisement
ಈ ಪ್ರಭೇದದ ಬಾಲದಲ್ಲಿ ಏಳು ಜತೆ ಆಸ್ಟಿಯೋಡರ್ಮ್‍ಗಳು ಇದ್ದು, ಇದು ಡೈನೋಸಾರ್‍ಗೆ ಆಯುಧವಾಗಿ ಕೆಲಸ ಮಾಡಲು ಸಹಾಯ ಮಾಡುತ್ತಿತ್ತು ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ ಪತ್ತೆಯಾಗಿರುವ ಡೈನೋಸಾರ್‌ಗಳಿಗಿಂತ ಇದು ವಿಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜರತಾರಿ ಸೀರೆ, ಆಭರಣ ಧರಿಸಿ ರೈಲ್ವೇ ನಿಲ್ದಾಣದಲ್ಲಿ ಊಟ ಹಂಚಿದ ಮಹಿಳೆ
ಇದು ಜರಿ ಗಿಡವನ್ನು ಹೋಲುವ ಬಾಲದ ರಚನೆ ಹೊಂದಿದ್ದು, ಅಸ್ಥಿಪಂಜರದ 80% ದಷ್ಟು ಭಾಗಗಳನ್ನು ಕಂಡುಹಿಡಿಯಲಾಗಿದೆ. ಸುಮಾರು 7 ಅಡಿ ಉದ್ದ ಹಾಗೂ 150 ಕೆಜಿ ತೂಗಬಹುದಾದ ಪ್ರಭೇದ ಸಸ್ಯಾಹಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.