ಕೊಪ್ಪಳ: ಹನುಮ ಜನ್ಮಸ್ಥಳದ ಬಗ್ಗೆ ತಿಂಗಳಿಗೊಂದು ರಾಜ್ಯ ಕ್ಯಾತೆ ತೆಗೆಯುತ್ತಿದೆ. ಹನುಮಂತ ಗೋವಾದಲ್ಲಿ ಜನಿಸಿದ್ದಾನೆ ಎಂದು ವಾಲ್ಮೀಕಿ ರಾಮಾಯಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಗೋವಾದ ಮಾಜಿ ಡಿಸಿಎಂ ರಮಾಕಾಂತ್ ಖಲಾಪ್ ಅವರ ಪುತ್ರ, ಇತಿಹಾಸ ಸಂಶೋಧಕ ಶ್ರೀನಿವಾಸ್ ಖಲಾಪ್ ಹೊಸ ವಾದ ಹುಟ್ಟು ಹಾಕಿದ್ದಾರೆ.
Advertisement
ಕರ್ನಾಟಕದ ಕೊಪ್ಪಳದ ಅಂಜನಾದ್ರಿಯ ಕಿಷ್ಕಿಂಧೆ ಅಲ್ಲ, ಆಂಧ್ರ ಪ್ರದೇಶದ ತಿರುಮಲ ತಿರುಪತಿಯ ಆಕಾಶಗಂಗಾವೇ ಆಂಜನೇಯ ಹುಟ್ಟಿದ ಸ್ಥಳ ಅಂತ ಟಿಟಿಡಿ ವಾದಿಸಿತ್ತು. ವಾರದ ಹಿಂದಷ್ಟೇ ನಾಸಿಕ್‍ನಲ್ಲಿರುವ ಅಂಜನೇರಿ ಕೋಟೆಯೇ ಹನುಮ ಜನ್ಮಸ್ಥಳ ಅಂತ ಮಹಾರಾಷ್ಟ್ರದ ಸ್ವಾಮೀಜಿಗಳು ಧರ್ಮಸಂಸತ್ ನಡೆಸಿ, ಗಲಾಟೆಯಿಂದ ಅರ್ಧಕ್ಕೇ ಮೊಟುಕಾಗಿತ್ತು. ಇದನ್ನೂ ಓದಿ: ಗೋ ಶಾಲೆಯಲ್ಲಿ ಒಂದು ತಿಂಗಳ ಕಾಲ ಸೇವೆ – ಷರತ್ತು ವಿಧಿಸಿ ಆರೋಪಿಗೆ ಜಾಮೀನು
Advertisement
Advertisement
ಇದರ ಬೆನ್ನಲ್ಲೇ ಶ್ರೀನಿವಾಸ್ ಖಲಾಪ್, ಹನುಮಂತನ ತಾಯಿ ಅಂಜನಿದೇವಿ ದ್ವೀಪವೊಂದರ ಕಡಲ ತೀರದಲ್ಲಿ ತಪಸ್ಸು ಮಾಡುತ್ತಾರೆ. ಅದಕ್ಕೆ ವರವಾಗಿ ವಾಯುದೇವ ಹನುಮನನ್ನು ಪುತ್ರನಾಗಿ ಕರುಣಿಸುತ್ತಾರೆ. ಆ ದ್ವೀಪವನ್ನು ಅಂಜನಿ ದ್ವೀಪ ಎಂದು ಕರೆಯಲಾಗಿತ್ತು. ಇದೀಗ `ಅಂಜೆದಿನ ದೀಪ’ ಎನ್ನುವ ಹೆಸರಿದೆ. ಈ ದ್ವೀಪ ಕಾರವಾರಕ್ಕೆ ಹತ್ತಿರವಿದೆಯಾದರೂ ಐತಿಹಾಸಿಕ ಹಿನ್ನೆಲೆಗಳನ್ನು ಗುರುತಿಸಿದರೆ ಇದು ಗೋವಾಕ್ಕೆ ಸೇರಿದ್ದಾಗಿದೆ ಅನ್ನೋದು ಶ್ರೀನಿವಾಸ್ ಖಲಾಪ್ ವಾದವಾಗಿದೆ. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಹನುಮನಿಗೆ ಸಂಬಂಧಿಸಿದ ಹೆಸರುಳ್ಳ ಸ್ಥಳಗಳು, ಊರುಗಳಿವೆ. ಆದರೆ, ಹನುಮ ಹುಟ್ಟಿದ್ದು, ವಾನರ ಸಾಮ್ರಾಜ್ಯ ಇದ್ದಿದ್ದು ಕಿಷ್ಕಿಂಧೆ ರಾಜ್ಯದಲ್ಲಿ ಮಾತ್ರ ಅಂತ ರಾಜ್ಯದ ಇತಿಹಾಸಕಾರರು ಹೇಳುತ್ತಿದ್ದಾರೆ. ಇದನ್ನೂ ಓದಿ: ವಾರಣಾಸಿ ಸರಣಿ ಬಾಂಬ್ ಸ್ಫೋಟ – 16 ವರ್ಷಗಳ ನಂತರ ಆರೋಪಿಯನ್ನು ಗುರುತಿಸಿದ ಹೈಕೋರ್ಟ್
Advertisement