ಬೆಂಗಳೂರು: ವಿಶೇಷ ಹಾವಿನ ಮೊಟ್ಟೆಯನ್ನು ರಕ್ಷಣೆ ಮಾಡಿ, ಅವುಗಳಿಗೆ ಕೃತಕ ಶಾಖ ನೀಡುವ ಮೂಲಕ ಮರಿ ಮಾಡಿಸಿ ಜೀವ ನೀಡಿರುವ ಅಪರೂಪದ ಘಟನೆ ಸಿಲಿಕಾನ್ ಸಿಟಿಯ ಹೆಗ್ಡೆ ನಗರದಲ್ಲಿ ನಡೆದಿದೆ.
ಬಿಬಿಎಂಪಿ ವನ್ಯಜೀವಿ ಸಂರಕ್ಷಕ ರಾಜೇಶ್ ಕುಮಾರ್ ಅವರು ಹಾವಿನ ಮೊಟ್ಟೆ ರಕ್ಷಣೆ ಮಾಡಿದ್ದಾರೆ. ಹೆಗ್ಡೆ ಅವರು ನಗರದಲ್ಲಿ ಮನೆಯೊಂದರ ಸಂಪಿನ ಕಬ್ಬಿಣದ ಸಲಾಕೆ ಮೇಲೆ ಮೊಟ್ಟೆ ಇಟ್ಟು ಹಾವು ನೀರಿನಲ್ಲಿ ಬಿದ್ದಿತ್ತು. ಈ ವೇಳೆ ಮನೆಯವರು ವನ್ಯಜೀವಿ ಸಂರಕ್ಷಕ ರಾಜೇಶ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ರಾಜೇಶ್ ಅವರು ತಾಯಿ ಹಾವು ಹಾಗೂ ಅದರ 8 ರಲ್ಲಿ 7 ಮೊಟ್ಟೆಗಳನ್ನು ರಕ್ಷಿಸಿದ್ದಾರೆ.
ರಕ್ಷಣೆ ಮಾಡಿರುವ ಹಾವಿನ ಮೊಟ್ಟೆಗಳು ಕಾಮನ್ ಕುಕ್ರಿ ಎಂಬ ಜಾತಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಮೊದಲು ತಾಯಿ ಹಾವನ್ನು ಕಾಡುಪ್ರದೇಶದಲ್ಲಿ ಬಿಟ್ಟಿದ್ದೇವೆ. ಬಳಿಕ ಹಾವಿನ ಮೊಟ್ಟೆಗಳನ್ನು ರಕ್ಷಿಸಿ ಮರಳಿನಲ್ಲಿಟ್ಟು ಅದರ ಆರೈಕೆ ಮಾಡಿದ್ದು, ಹಾವುಗಳು ಮೊಟ್ಟೆಗಳಿಗೆ ಕಾವು ಕೊಡುವ ರೀತಿಯಲ್ಲೇ ಕೃತಕವಾಗಿ ಶಾಖ ನೀಡಿ ಎಲ್ಲ ಮೊಟ್ಟೆಗಳು ಮರಿಯಾಗಿಸಿದ್ದೇವೆ ಎಂದು ರಾಜೇಶ್ ಹೇಳಿದ್ದಾರೆ.
ರಾಜೇಶ್ ಅವರು ಹಾವಿನ ಮರಿಗಳಿಗೆ 60-80 ದಿನಗಳು ಅದರ ಆರೈಕೆಗಾಗಿ ಸಮಯ ಮೀಸಲಿಟ್ಟು ಬಹಳ ಸೂಕ್ಷ್ಮವಾಗಿ ಗಮನಕೊಟ್ಟು ಕೆಲಸ ಮಾಡಿದ್ದಾರೆ. ಇಂತಹ ಅಪರೂಪದ ಹಾವಿನ ಜೀವಗಳನ್ನು ರಕ್ಷಣೆ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಕಾರಣರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=iKVFQHkX1w8