ಬೆಂಗಳೂರು: ಭಾನುವಾರ ಸುರಿದ ಭಾರೀ ಮಳೆಯ ಹಿನ್ನೆಲೆ ಕೆಆರ್ ಸರ್ಕಲ್‌ನ (KR Circle) ಅಂಡರ್ ಪಾಸ್‌ನಲ್ಲಿ (Under Pass) ಕುಟುಂಬವೊಂದು ಕಾರಿನಲ್ಲಿ (Car) ಸಿಲುಕಿಕೊಂಡಿತ್ತು. ಘಟನೆಯಲ್ಲಿ ಪಬ್ಲಿಕ್ ಟಿವಿಯ ಚಾಲಕ (Public TV Driver) ವಿಜಯ್ ಕುಮಾರ್ (Vijay Kumar) ತಮ್ಮ ಪ್ರಾಣದ ಹಂಗನ್ನು ತೊರೆದು, ನೀರಲ್ಲಿ ಈಜಿ ಐವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ದಿನ ರಾಜ್ಯ ರಾಜಧಾನಿಯಲ್ಲಿ ಸುರಿದ ಭಾರೀ ಮಳೆಗೆ ಕುಟುಂಬವೊಂದು ಕಾರಿನಲ್ಲಿ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಪಬ್ಲಿಕ್ ಟಿವಿಯ ಚಾಲಕ ವಿಜಯ್ ಕುಮಾರ್ ಹಾಗೂ ಇತರರು ಈಜಿಕೊಂಡು ಹೋಗಿ ಐವರನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP
ದುರಾದೃಷ್ಟವಶಾತ್ ಘಟನೆಯಲ್ಲಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರು ಸಾವನ್ನಪ್ಪಿದ್ದಾರೆ. ಕ್ಯಾಬ್ ಚಾಲಕ ಸೇರಿದಂತೆ ಐವರನ್ನು ರಕ್ಷಿಸಲಾಗಿದೆ.
ಇದೀಗ ವಿಜಯ್ ಕುಮಾರ್ ಹಾಗೂ ಪಬ್ಲಿಕ್ ಟಿವಿಯ ಕಾರ್ಯಕ್ಷಮತೆಗೆ ಮೆಚ್ಚಿ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಬೆಂಗಳೂರು ಸಂಚಾರಿ ಜಂಟಿ ಆಯುಕ್ತ ಅನುಚೇತನ್ ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?