ಬೆಂಗಳೂರು: ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ವರುಣನ (Rain) ಆರ್ಭಟಕ್ಕೆ ಯುವತಿ (Young Woman) ಬಲಿಯಾಗಿದ್ದರು. ನಗರದ ಕೆಆರ್ ಸರ್ಕಲ್‌ನ (KR Circle) ಅಂಡರ್ ಪಾಸ್‌ನಲ್ಲಿ (Underpass) ನಿಂತಿದ್ದ ಮಳೆ ನೀರಿನಲ್ಲಿ ಕಾರು (Car) ಮುಳುಗಿ ಟೆಕ್ಕಿ ಭಾನುರೇಖಾ ಸಾವನ್ನಪ್ಪಿದ್ದರು. ಇದೀಗ ದುರ್ಘಟನೆ ಬಳಿಕ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿದೆ.
ಭಾರೀ ಮಳೆಗೆ ಅಂಡರ್ ಪಾಸ್‌ನಲ್ಲಿ ಒಂದು ಸಾವಾದ ಬಳಿಕ ಬಿಬಿಎಂಪಿ ಇದೀಗ ನಗರದ ಅಂಡರ್ ಪಾಸ್‌ಗನ್ನು ಮುಚ್ಚಿಸುತ್ತಿದೆ. ವಿಂಡ್ಸನ್ ಮ್ಯಾನರ್ ಸರ್ಕಲ್ ಬಳಿಯ ಅಂಡರ್ ಪಾಸ್‌ನಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
Advertisement
Advertisement
ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‌ನಲ್ಲಿ ಒಳ ಭಾಗದಲ್ಲಿ ಭಾರೀ ಮಳೆಯ ಹಿನ್ನೆಲೆ ನೀರು ನಿಂತಿದೆ. ಸದ್ಯ ನೀರು ಹೆಚ್ಚಿರುವ ಕಾರಣ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸೋಮವಾರ ಅಂಡರ್ ಪಾಸ್‌ಗಳ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಗುತ್ತಿದೆ. ಕಾವೇರಿ ಜಂಕ್ಷನ್ ಕ್ಲೋಸ್ ಮಾಡಿ ಬಿಬಿಎಂಪಿ ಸಿಬ್ಬಂದಿ ಕಸ ಕಡ್ಡಿಗಳನ್ನು ತೆಗೆದುಹಾಕಿ ಸ್ವಚ್ಛತಾಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರೀ ಗಾಳಿ, ಮಳೆ – ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮರ ಬಿದ್ದು ವ್ಯಕ್ತಿ ಸಾವು
Advertisement
Advertisement
ಘಟನೆಯೇನು?
ಇನ್ಫೋಸಿಸ್ ಉದ್ಯೋಗಿಯಾಗಿದ್ದ ಭಾನುರೇಖಾ ಎಲೆಕ್ಟ್ರಾನಿಕ್ ಸಿಟಿಯ ಪ್ರಗತಿ ನಗರದಲ್ಲಿ ವಾಸವಾಗಿದ್ದರು. ಮೂಲತಃ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ತೇಲಾಪೋರಲು ಗ್ರಾಮದವರಾದ ಇವರು, ಹೊಸದಾಗಿ ಪ್ರಗತಿ ನಗರದಲ್ಲಿ ಮನೆ ಖರೀದಿ ಮಾಡಿದ್ದರು. ಮನೆ ನೋಡಲು ಆಂಧ್ರ ಪ್ರದೇಶದಿಂದ ಭಾನುರೇಖಾ ಸಂಬಂಧಿಗಳು ಆಗಮಿಸಿದ್ದರು.
ಈ ವೇಳೆ ಕ್ಯಾಬ್ ಬುಕ್ ಮಾಡಿ ಬೆಂಗಳೂರು ಸುತ್ತಾಟಕ್ಕೆ ಕುಟುಂಬ ಬಂದಿತ್ತು. ಇಸ್ಕಾನ್‌ಗೆ ಹೋಗಿ ವಾಪಸ್ ಕಬ್ಬನ್ ಪಾರ್ಕ್‌ಗೆ ಹೋಗುವ ವೇಳೆ ಕೆಆರ್ ಸರ್ಕಲ್‌ನ ಅಂಡರ್ ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಮುಳುಗಿ ಭಾನುರೇಖಾ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರಣ ಮಳೆ – ಎಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ?