ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬೈತಕೋಲ್ ಸಮೀಪದ ಲೇಡಿಸ್ ಬೀಚ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಮರಳಿ ಬರಲಾಗದೇ ಮೂರು ದಿನದಿಂದ ಅನ್ನಹಾರವಿಲ್ಲದೇ ಸಿಲುಕಿಕೊಂಡಿದ್ದರು. ಅವರನ್ನು ಕರಾವಳಿ ಕಾವಲುಪಡೆ ರಕ್ಷಣೆ ಮಾಡಿದೆ.
Advertisement
ಒಡಿಶಾ ಮೂಲದ ನಿರ್ಮಲ್ ಕುಸಮ್(45) ಎಂಬವರು ಕಳೆದ ಮೂರು ದಿನಗಳಿಂದ ಆಹಾರವಿಲ್ಲದೆ ಬೀಚ್‍ನಲ್ಲಿ ಸಿಲುಕಿಕೊಂಡಿದ್ದರು. ಕಾರವಾರದ ಕರಾವಳಿ ಕಾವಲುಪಡೆಯ ಸಿಪಿಐ ನಿಶ್ಚಲ್ ಕುಮಾರ್ ನೇತೃತ್ವದ ತಂಡ ರಕ್ಷಿಸಿ ಕಾರವಾರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ಸಿಕ್ಕ ಚೀಲದಲ್ಲಿ ಸಿಕ್ತು ನವಜಾತ ಶಿಶು
Advertisement
Advertisement
ಒಡಿಶಾ ಮೂಲದ ನಿರ್ಮಲ್ ಕುಸಮ್ ಲೇಡಿಸ್ ಬೀಚ್ ಗೆ ಹೇಗೆ ತೆರಳಿದ್ದಾರೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದ್ದು, ಮೀನುಗಾರಿಕೆ ಕೆಲಸಕ್ಕಾಗಿ ಒರಿಸ್ಸಾದಿಂದ ಕಾರವಾರಕ್ಕೆ ಬಂದಿರುವುದಾಗಿ ಮಾತ್ರ ಮಾಹಿತಿ ದೊರೆತಿದೆ. ಮೂರು ದಿನದ ಹಿಂದೆ ಲೇಡಿಸ್ ಬೀಚ್ ಬಳಿ ಮೀನುಗಾರಿಕೆಗೆ ತೆರಳಿದ್ದಾಗ ಅಲ್ಲಿಯೇ ಉಳಿದಿರುವ ಸಾಧ್ಯತೆ ಇದ್ದು, ಮೂರು ದಿನದಿಂದ ಉಪವಾಸವಿದ್ದು ಅಲ್ಲೇ ದಿನ ಕಳೆದಿದ್ದಾರೆ. ಇಂದು ಅವರನ್ನು ರಕ್ಷಣೆ ಮಾಡಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಚೇತರಿಸಿಕೊಳ್ಳುತಿದ್ದು, ಹೆಚ್ಚಿನ ವಿವರ ತಿಳಿದುಬರಬೇಕಿದೆ. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಬುದ್ಧಿವಂತ ರಾಜಕಾರಣಿ: ಸಿ.ಟಿ ರವಿ
Advertisement