ಹಾವೇರಿ: ಧಾರಾಕಾರ ಮಳೆ (Rain) ಸುರಿದ ಪರಿಣಾಮ ನಡು ನೀರಿನಲ್ಲಿ ಸಿಲುಕಿದ್ದ 30 ಭಕ್ತರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಹಾವೇರಿ (Haveri) ಜಿಲ್ಲೆ ಸವಣೂರು (Savanur) ತಾಲೂಕಿನ ಬರದೂರು ಗ್ರಾಮದ ಬಳಿ ನಡೆದಿದೆ.
ಪಂಡರಾಪುರಕ್ಕೆ ತೆರಳುತ್ತಿದ್ದ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮದ 30 ಭಕ್ತರು ಭಾನುವಾರ ತಡರಾತ್ರಿ ಬರದೂರಿನ ಹೊರವಲಯದಲ್ಲಿರುವ ರಾಮಲಿಂಗ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ತಡರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಮಠ ಜಲಾವೃತಗೊಂಡು ಭಕ್ತರು ನೀರಿನಲ್ಲಿ ಸಿಲುಕಿಕೊಂಡಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅವಾಂತರ – ಎಲ್ಲಿ ಏನಾಗಿದೆ?
ಸ್ಥಳಕ್ಕೆ ಹಾವೇರಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಭಕ್ತರನ್ನು ರಕ್ಷಿಸಿದ್ದಾರೆ. ಭಾರಿ ಪ್ರಮಾಣದ ನೀರಿನಿಂದ ಗ್ರಾಮಸ್ಥರಿಗೆ ದಿಕ್ಕು ತೋಚದಂತಾಗಿದೆ. ಇದನ್ನೂ ಓದಿ: ಧಾರವಾಡ| ಮಳೆಗೆ ತುಂಬಿ ಹರಿಯುತ್ತಿರುವ ಹಳ್ಳಗಳು