ಬೆಂಗಳೂರು: 213 ನೇ ಫಲಪುಷ್ಪ ಪ್ರದರ್ಶನ ಇಂದು ಲೋಕಾರ್ಪಣೆಗೊಂಡಿದೆ. ಇಂದಿನಿಂದ ಜನವರಿ 30ರವರೆಗೆ ನಡೆಯಲಿರುವ ಫಲಪುಷ್ಪ (FlowerShow) ಪ್ರದರ್ಶನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಿದ್ಯುಕ್ತ ಚಾಲನೆ ನೀಡಿದರು.
Advertisement
ಬಳಿಕ ಮಾತನಾಡಿದ ಸಿಎಂ, ಇಂದು ಅತ್ಯಂತ ಸಂತೋಷದಿಂದ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಿದ್ದೇನೆ. 10-15 ಲಕ್ಷ ಜನ ಬರೋ ನಿರೀಕ್ಷೆ ಇದೆ. ರಾಜ್ಯದ ಸಸ್ಯಸಂಪತ್ತಿನ ಪ್ರದರ್ಶನ ಆಗ್ತಿದೆ. ರಾಜ್ಯದಲ್ಲಿ ಹಸಿರು ವಿಸ್ತರಣೆಗಾಗಿ 100 ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದರು.
Advertisement
Advertisement
ರಾಜ್ಯದ ತೋಟಗಾರಿಕೆಯಿಂದ ಹಸಿರು ಹೆಚ್ಚಾಗಿ, ಉತ್ಪಾದನೆ ಹೆಚ್ಚಾಗುತ್ತದೆ. ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರಾಗಿತ್ತು. ಬೆಂಗಳೂರಿನ ಗಾರ್ಡನ್ ಗಳನ್ನು ಬೆಳೆಸುತ್ತೇವೆ. ಗಾರ್ಡನ್ ಸಿಟಿಯ ಗತವೈಭವ ಮತ್ತೆ ಮರುಕಳಿಸಲಿ ಎಂದು ಹೇಳಿದರು.
Advertisement
ಈ ಫ್ಲವರ್ ಶೋನಿಂದ ಸಸ್ಯ ಸಂಪತ್ತು ಪ್ರದರ್ಶನ ಆಗುತ್ತಿದೆ. ರಾಜ್ಯಾದ್ಯಂತ ಹಸಿರು ವಿಸ್ತರಣೆ ಆಗಬೇಕಿದೆ. ರಾಜ್ಯದಲ್ಲಿ ಹಸಿರೀಕರಣ ವಿಸ್ತರಣೆಗೆ ಬಜೆಟ್ ನಲ್ಲಿ 100 ಕೋಟಿ ಮೀಸಲಿಡುತ್ತೇವೆ. ಗುಡ್ಡಗಾಡು ಪ್ರದೇಶದಲ್ಲಿ ಹಸಿರು ಸಮೃದ್ಧಿಯಾಗಬೇಕು. ತೋಟಗಾರಿಕೆ ಫಾರ್ಮ್ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಗಾರ್ಡನ್ ಸಿಟಿ (Garden City) ಎಂಬ ಹೆಸರು ಈಗ ಕಡಿಮೆ ಆಗಿದೆ. ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿ ಬಿಬಿಎಂಪಿ ಪಾರ್ಕ್ ಅಭಿವೃದ್ಧಿಗೆ ಒತ್ತು ನೀಡಲಾಗುತ್ತೆ. ನಗರದ ಹೊರವಲಯದಲ್ಲಿ ಗಾರ್ಡನ್ ಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದರು. ಇದನ್ನೂ ಓದಿ: ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್
ಒಟ್ಟಿನಲ್ಲಿ ಫಲಪುಷ್ಪ ಮೇಳಕ್ಕೆ ಲಾಲ್‍ಬಾಗ್ ಅದ್ಧೂರಿಯಾಗಿ ಸಿದ್ಧಗೊಂಡಿದೆ. ಬೆಂಗಳೂರು ನಗರದ ಚಿತ್ರಣ ಈ ಬಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಕಂಗೊಳಿಸಲಿದೆ. ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಥೀಮ್ ಬೆಂಗಳೂರು ನಗರದ ಇತಿಹಾಸವಾಗಿದ್ದು, ಲಾಲ್‍ಬಾಗ್‍ನಲ್ಲಿ ಸೃಷ್ಟಿಯಾಗಲಿದೆ. ಮೆಗಾ ಫ್ಲೋರಲ್ ಫ್ಲೋ ಪರಿಕಲ್ಪನೆ ಪುಷ್ಪ ಪಿರಾಮಿಡ್ ಗಳು ಕಂಗೊಳಸಲಿದೆ. ವಿದೇಶದಿಂದಲೂ ವಿವಿಧ ಬಗೆಯ ಹೂಗಳನ್ನ ತರಸಿ ಅಲಂಕಾರ ಮಾಡಲಾಗುತ್ತದೆ.
ಇದೇ ವೇಳೆ ತೋಟಗಾರಿಕಾ ಸಚಿವ ಮುನಿರತ್ನ (Muniratna), ತೋಟಗಾರಿಕೆ ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್ (K Nagendra Prasad), ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k