ಮಂಡ್ಯ: ಚಿಂತಕ ಪ್ರೊ. ಕೆ.ಎಸ್.ಭಗವಾನ್ (Prof KS Bhagwan) ಇದೀಗ ಮತ್ತೆ ಆದರ್ಶ ಪುರುಷ ರಾಮನ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.
Advertisement
ಮಂಡ್ಯ (Mandya) ಜಿಲ್ಲೆಯ ಕೆಆರ್ ಪೇಟೆಯಲ್ಲಿ ನಡೆದ ಪುಸ್ತಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮ ರಾಜ್ಯ ಎಂದು ದೇಶದಲ್ಲಿ ಕಥೆ ಕಟ್ಟಿದ್ದಾರೆ. ರಾಮ ರಾಜ್ಯ ಮಾತು ಹರಡಲು ಮಹಾತ್ಮ ಗಾಂಧೀಜಿ (Mahatma Gandhiji) ಅವರೇ ಕಾರಣ. ವಾಲ್ಮೀಕಿ ರಾಮಾಯಣ (Valmiki Ramayana) ಓದಿ ಉತ್ತರ ಕಾಂಡದಲ್ಲಿ ಓದಿದ್ರೆ ರಾಮ ರಾಜ್ಯಕ್ಕೆ ಅರ್ಥ ಇಲ್ಲ. ವಾಲ್ಮೀಕಿ ರಾಮಾಯಣದ ಪ್ರಕಾರ ರಾಜ್ಯ ರಾಜ್ಯಭಾರ ಮಾಡಿಲ್ಲ ಎಂದು ಹೇಳಿದ್ದಾರೆ.
Advertisement
Advertisement
ಪುರೋಹಿತರ ಜೊತೆ ಕೂತು ಆ ಕಥೆ ಈ ಕಥೆ ಎಂದು ರಾಮ ಹರಟೆ ಹೊಡೆಯುತ್ತಿದ್ದ. ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ರಾಮ ಹೆಂಡ ಕುಡಿಯುತ್ತಿದ್ದ. ಸೀತೆಗೂ ರಾಮ ಹೆಂಡ ಕುಡಿಸುತ್ತಿದ್ದ. ವಾಲ್ಮೀಕಿ ರಾಮಾಯಣ ಉತ್ತರ ಕಾಂಡದಲ್ಲಿ ಇದರ ಬಗ್ಗೆ ದಾಖಲೆ ಇವೆ. ರಾಮ ರಾಜ್ಯಭಾರ ಮಾಡಿದ್ದು 11 ವರ್ಷ. ಇದರಲ್ಲಿ ಗರ್ಭಿಣಿ ಸೀತೆಯನ್ನು ಕಾಡಿಗೆ ಕಳಿಸಿದ. ಸೀತೆಗೆ ಮಾತನಾಡಲು ರಾಮ ಬಿಡಲಿಲ್ಲ. ಲಕ್ಷ್ಮಣನನ್ನು ರಾಮ ಗಡಿಪಾರು ಮಾಡಿದ ಎಂದರು. ಇದನ್ನೂ ಓದಿ: ಸಿದ್ದು ಸೋಲಿಸಲು ಅಖಾಡಕ್ಕಿಳಿದ ಬಿಎಲ್ ಸಂತೋಷ್
Advertisement
ಸರಯೂ ನದಿಯ ದಡಲ್ಲಿ ಅತ್ತುಕೊಂಡು ಲಕ್ಷ್ಮಣ ಸತ್ತು ಹೋದ. ಶೂದ್ರನ ತಲೆಯನ್ನು ರಾಮ ಕಡಿದಿದ್ದಾನೆ. ರಾಮನನ್ನು ಆದರ್ಶ ದೊರೆ ಎಂದು ಕರೆಯಲು ಹೇಗೆ ಸಾಧ್ಯ. ನಮ್ಮ ಜನರಿಗೆ ಸತ್ಯ ಗೊತ್ತಿಲ್ಲದೆ ಮಕ್ಕಳಿಗೆ ರಾಮ ಎಂದು ಹೆಸರಿಟ್ಟಿದ್ದಾರೆ. ಹೆಣ್ಣು ಮಕ್ಕಳು ರಾಮ ರಾಮ ಅಂತಾರೆ, ರಾಮ ತನ್ನ ಹೆಂಡತಿಯನ್ನು ಕಾಡಿಗೆ ಕಳಿಸಿದವ ಎಂದು ಭಗವಾನ್ ಹೇಳಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k