74 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್ – ಸ್ವದೇಶಿ ಗನ್‌ಗಳಿಂದ ಸೆಲ್ಯೂಟ್

ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ (Republic Day) ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ (Made In India) ಆಗಿರಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಗೆ ಇದೇ ಮೊದಲ ಬಾರಿಗೆ ದೇಶಿಯ ಕುಶಾಲುತೋಪಿನ ಗೌರವ ಸಿಗಲಿದೆ.
ಇಷ್ಟು ವರ್ಷಗಳ ಕಾಲ ಗನ್ ಸೆಲ್ಯೂಟ್‍ಗೆ ಬ್ರಿಟೀಷರ ಕಾಲದ 25 ಪೌಂಡರ್ ಗನ್‍ಗಳನ್ನು ಭಾರತೀಯ ಸೇನೆ ಬಳಸುತ್ತಿತ್ತು. ಆದರೆ ಈ ಸಂಪ್ರದಾಯಕ್ಕೆ ಈಗ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಭಾರತದಲ್ಲೇ ದೇಶಿಯವಾಗಿ ತಯಾರಿಸಲಾದ ಫೀಲ್ಡ್ ಗನ್‍ಗಳಾದ 105 ಎಂಎಂ ಗನ್‍ಗಳನ್ನು ಬಳಸಿ ರಾಷ್ಟ್ರಪತಿಗೆ ಗನ್ ಸೆಲ್ಯೂಟ್ ಸಲ್ಲಿಸಲಾಗುತ್ತದೆ. ಇದನ್ನೂ ಓದಿ: ಕುರ್ಚಿ ತರಲು ವಿಳಂಬ – ಕಾರ್ಯಕರ್ತರಿಗೆ ಕಲ್ಲು ಎಸೆದ ತಮಿಳುನಾಡಿನ ಸಚಿವ
ಈ ಬಗ್ಗೆ ಸೇನೆಯ ದೆಹಲಿ ವಿಭಾಗದ ಸಿಬ್ಬಂದಿ ಮುಖ್ಯಸ್ಥ ಮೇಜರ್ ಜನರಲ್ ಭವಾನಿ ಕುಮಾರ್ ಮಾಹಿತಿ ನೀಡಿದ್ದಾರೆ. ನಮ್ಮೆಲ್ಲ ಆಯುಧಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಆಗುವ ದಿನಗಳು ದೂರವಿಲ್ಲ ಎಂದಿದ್ದಾರೆ.
ಅಷ್ಟೇ ಅಲ್ಲದೇ ಪರೇಡ್‍ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ನೌಕಾ ಪಡೆಯ ಪದಾತಿ ದಳವನ್ನು ಮಹಿಳಾ ಸೇನಾಧಿಕಾರಿ, ಕರ್ನಾಟಕ ಮೂಲದ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮುನ್ನಡೆಸಲಿದ್ದಾರೆ. ಅಗ್ನಿವೀರರು ಪರೇಡ್‍ನಲ್ಲಿ ಮೊದಲ ಬಾರಿಗೆ ಭಾಗವಹಿಸಲಿದ್ದಾರೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k